ಒಂದಾದ ಮನಸುಗಳು

7

ಒಂದಾದ ಮನಸುಗಳು

Published:
Updated:

– ಶಿವಕುಮಾರ ಕರನಂದಿ

ಮನದ ಗೂಡಿನೊಳಗೆ ಮಾತೊಂದು

ಮಲಗಿದೆ ಸದ್ದುಗದ್ದಲವಿಲ್ಲದೆ

ಮೌನ ಮೀರಿ ಬರಲೊಲ್ಲದು

ಅಹಂ ಎಂಬ ಬೇಲಿಯ ದಾಟಿ

ಚೆಂದದ ಗೆಳೆತನ ಮುರಿದು ಬಿದ್ದಿದೆ

ಅವಶೇಷಗಳಡಿ ಹುದುಗಿ ಹೋಗಿದೆ

ಒಂದೇ ಆತ್ಮ ಎರಡು ದೇಹಗಳಂದು

ತುಡಿದ ಜೀವ ದೂರ ಸರಿದಿವೆ ಇಂದು

 

ಮಾತಾಗಲು ಮನಸ್ಸಿಲ್ಲ ಇಬ್ಬರೊಳಗೆ

ನರಳುತಿವೆ ಮನಸುಗಳ ಒಳಗೊಳಗೆ

ಮುಖವಾಡ ಬಿಂಕ ಬಿಗುಮಾನದೊಳಗೆ

ಮೊಗದಲಿ ಮುಗುಳು ನಗೆ ತೋರಿಕೆಗೆ

ತಾನೇ ಮೇಲು ಎನ್ನುವುದ ಬಿಟ್ಟು

ಮಾತಿಗೆ ಮಾತಾಗಬೇಕು ಮನ

ಚೈತ್ರದ ಚಿಗುರಂತೆ ಸ್ನೇಹ ಮತ್ತೆ ಮೊಳೆಯಲಿ

ನಿತ್ಯ ಹಚ್ಚ ಹಸಿರಂತೆ ಕಂಗೊಳಿಸಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry