ಸುಳ್ಯದಲ್ಲಿ 12 ಸೆಂ.ಮೀ ಮಳೆ

7

ಸುಳ್ಯದಲ್ಲಿ 12 ಸೆಂ.ಮೀ ಮಳೆ

Published:
Updated:

ಬೆಂಗಳೂರು: ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆದಿದೆ.

ಸುಳ್ಯದಲ್ಲಿ ಅತಿ ಹೆಚ್ಚು 12 ಸೆಂ.ಮೀ ಮಳೆ ದಾಖಲಾಗಿದೆ. ವಿರಾಜಪೇಟೆ, ನೆಲಮಂಗಲದಲ್ಲಿ ತಲಾ 7, ಮಂಗಳೂರು, ಪುತ್ತೂರು, ಕನಕಪುರದಲ್ಲಿ ತಲಾ 6, ಶ್ರವಣಬೆಳಗೊಳ, ಗುಂಡ್ಲುಪೇಟೆ, ಮಾಗಡಿಯಲ್ಲಿ ತಲಾ 5, ಧರ್ಮಸ್ಥಳ, ಸೋಮವಾರಪೇಟೆ, ಎಚ್‌.ಡಿ.ಕೋಟೆ, ಚಾಮರಾಜನಗರ, ಬೆಂಗಳೂರು, ರಾಮನಗರದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 24 ತಾಸಿನಲ್ಲಿ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಅನೇಕ ಕಡೆಗಳಲ್ಲಿ, ಉತ್ತರ ಒಳನಾಡಿನ ಅಲ್ಲಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry