ಸಿನಾಪ್ಟಿಕ್ಸ್ ಕೇಂದ್ರ ಉದ್ಘಾಟನೆ

7

ಸಿನಾಪ್ಟಿಕ್ಸ್ ಕೇಂದ್ರ ಉದ್ಘಾಟನೆ

Published:
Updated:

ಬೆಂಗಳೂರು: ಅತ್ಯಾಧುನಿಕ ಸಂವಹನ ಸಾಧನಗಳನ್ನು ಅಭಿವೃದ್ಧಿಪಡಿಸುವ ಸಿನಾಪ್ಟಿಕ್ಸ್‌, ಬೆಂಗಳೂರಿನಲ್ಲಿ ವಿನ್ಯಾಸ ಕೇಂದ್ರ ಆರಂಭಿಸಿದೆ.

ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಜೀನ್‌ ಬೌಪಾರ್ಹಟ್‌ ಈ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ಪರಸ್ಪರ ಸಂವಹನ ಸಾಧಿಸುವ ಡಿಜಿಟಲ್‌ ಸಾಧನ (ಐಒಟಿ), ಸ್ಮಾರ್ಟ್‌ ಹೋಮ್ಸ್‌ಗಳಲ್ಲಿ ಬಳಕೆಯಾಗುವ ವಿವಿಧ ಬಗೆಯ ಸಾಧನಗಳು, ಬಯೊಮೆಟ್ರಿಕ್‌ ಮತ್ತು ಬಹುಮಾಧ್ಯಮ ಕ್ಷೇತ್ರಗಳಲ್ಲಿನ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಈ ಕೇಂದ್ರ ನೆರವಾಗಲಿದೆ.

ಈ ಕೇಂದ್ರದಲ್ಲಿ ಕೆಲಸ ಮಾಡುವ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ತಂತ್ರಜ್ಞರು ಅತ್ಯಾಧುನಿಕ ಸಂವಹನ ಸಾಧನಗಳನ್ನು ಅಭಿವೃದ್ಧಿಪಡಿಸಲಿದ್ದಾರೆ.

‘ವಿಶ್ವದಾದ್ಯಂತ ಇರುವ ಸಂಸ್ಥೆಯ ಗ್ರಾಹಕರಿಗೆ ಸೇವೆ ಸಲ್ಲಿಸಲು ಮತ್ತು ವಹಿವಾಟನ್ನು ವಿಸ್ತರಿಸಲು ಈ ಕೇಂದ್ರ ನೆರವಾಗಲಿದೆ’ ಎಂದು ಜೀನ್‌ ಬೌಪಾರ್ಹಟ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry