ಕುರಿಗಾಹಿ ಮೇಲೆ ಚಿರತೆ ದಾಳಿ

7

ಕುರಿಗಾಹಿ ಮೇಲೆ ಚಿರತೆ ದಾಳಿ

Published:
Updated:

ಮಳವಳ್ಳಿ: ತಾಲ್ಲೂಕಿನ ಚಂದಹಳ್ಳಿಯಲ್ಲಿ ಶನಿವಾರ ಕುರಿ ಮೇಯಿಸುತ್ತಿದ್ದ ದೊಡ್ಡಯ್ಯ ಎಂಬುವವರ ಮೇಲೆ ಚಿರತೆ ದಾಳಿಮಾಡಿ ಗಾಯಗೊಳಿಸಿದೆ.

ಗ್ರಾಮದ ಹೊರವಲಯದ ಬೀರನಗುಡ್ಡ ಸಮೀಪ ಮರದ ಮೇಲಿದ್ದ ಚಿರತೆ ಏಕಾಏಕಿ ದಾಳಿ ಮಾಡಿದೆ. ತೊಡೆಯ ಭಾಗವನ್ನು ಹಿಡಿದು ಎಳೆದೊಯ್ಯಲು ಯತ್ನಿಸಿದೆ. ಅವರು ಚೀರಾಡಿದಾಗ ಕುರಿಗಳು ದಿಕ್ಕಾಪಾಲಾಗಿ ಓಡಲಾಂಭಿಸಿದ್ದರಿಂದ ಚಿರತೆಯೂ ಗಾಬರಿಗೊಂಡು ಅವರನ್ನು ಬಿಟ್ಟು ಓಡಿಹೋಗಿದೆ.

ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು ಚೀರಾಟ ಕೇಳಿ ಸ್ಥಳಕ್ಕೆ ಓಡಿ ಬಂದರು. ನರಳುತ್ತಿದ್ದ ದೊಡ್ಡಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry