ಶಂಕಿತ ವ್ಯಕ್ತಿಗೆ ‘ನಿಫಾ’ ಇಲ್ಲ

7

ಶಂಕಿತ ವ್ಯಕ್ತಿಗೆ ‘ನಿಫಾ’ ಇಲ್ಲ

Published:
Updated:

ಗದಗ: 'ನಿಫಾ' ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಜಿಮ್ಸ್) ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಈ ಸೋಂಕು ಇಲ್ಲ ಎನ್ನುವುದು ದೃಢಪಟ್ಟಿದೆ.

‘ಶಂಕಿತ ವ್ಯಕ್ತಿ ಮೇ 24ರಂದು ಇಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅಂದೇ ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪುಣೆಯ ಎನ್ಐವಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದೆವು. ಮೇ 25ರಂದು ತಡರಾತ್ರಿ ವರದಿ ಕೈಸೇರಿದ್ದು, ಅವರಿಗೆ ‘ನಿಫಾ’ ಇಲ್ಲ ಎನ್ನುವುದು ದೃಢಪಟ್ಟಿದೆ’ ಎಂದು ಜಿಮ್ಸ್‌ ನಿರ್ದೇಶಕ ಪಿ.ಎಸ್‌.ಬೂಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ರೋಣ ತಾಲ್ಲೂಕಿನ ಮುಶಿಗೇರಿ ಗ್ರಾಮದ ಗಂಗಾಧರ ಈಶ್ವರಪ್ಪ ಬಡಿಗೇರ (52) ಎಂಬುವರು ನಿಫಾ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ‘ಜಿಮ್ಸ್‌’ನ ವಿಶೇಷ ನಿಗಾ ಘಟಕದಲ್ಲಿ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಘಟನೆ ಹಿನ್ನೆಲೆ:

ಗಂಗಾಧರ ಅವರು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ 6 ತಿಂಗಳಿಂದ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ನಿಫಾ ವೈರಾಣು ಹರಡಿದ ಬೆನ್ನಲ್ಲೇ ಆತಂಕಗೊಂಡು ಸ್ವಗ್ರಾಮಕ್ಕೆ ಮರಳಿದ್ದರು. ಊರಿಗೆ ಮರಳಿದ ನಂತರ ಅವರಿಗೆ ತಲೆಸುತ್ತು, ಕೆಮ್ಮು ಕಾಣಿಸಿಕೊಂಡಿತ್ತು. ಆರಂಭದಲ್ಲಿ ರೋಣ ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದರು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ನಿಫಾ ಸೋಂಕಿನ ಕೆಲವು ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ‘ಜಿಮ್ಸ್‌’ಗೆ ದಾಖಲಾಗುವಂತೆ ಸೂಚಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry