ತಿಮ್ಮಕ್ಕ ಪುತ್ರನಿಂದ ದೂರು

7

ತಿಮ್ಮಕ್ಕ ಪುತ್ರನಿಂದ ದೂರು

Published:
Updated:

ಬೆಂಗಳೂರು: ‘ಸಾಲುಮರದ ತಿಮ್ಮಕ್ಕ ಅವರ ಸಾವಿನ ಬಗ್ಗೆ ಸುಳ್ಳು ವದಂತಿ ಹಬ್ಬಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಅವರ ಸಾಕು ಮಗ ಉಮೇಶ್, ನಗರದ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

ನಗರ ಕಮಿಷನರ್ ಟಿ.ಸುನೀಲ್‌ ಕುಮಾರ್‌ ಅವರನ್ನು ಭೇಟಿ ಮಾಡಿದ ಉಮೇಶ್, ತಪ್ಪಿತಸ್ಥರನ್ನು ತ್ವರಿತವಾಗಿ ಬಂಧಿಸುವಂತೆ ಒತ್ತಾಯಿಸಿದರು. ಕಮಿಷನರ್‌ ಅವರ ಸಲಹೆಯಂತೆ ಠಾಣೆಗೆ ಹೋಗಿ ದೂರು ಸಲ್ಲಿಸಿದರು.

‘ತಿಮ್ಮಕ್ಕ ಅವರು ಆರೋಗ್ಯವಾಗಿದ್ದಾರೆ. ಸುಳ್ಳು ಸುದ್ದಿಯಿಂದಾಗಿ ಅವರಿಗೆ ಹಾಗೂ ಅಭಿಮಾನಿಗಳಿಗೆ ನೋವಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry