7

ನಾನು ಆರೂವರೆ ಕೋಟಿ ಜನರ ಮುಲಾಜಿನಲಿಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ: ಕುಮಾರಸ್ವಾಮಿ

Published:
Updated:
ನಾನು ಆರೂವರೆ ಕೋಟಿ ಜನರ ಮುಲಾಜಿನಲಿಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ: ಕುಮಾರಸ್ವಾಮಿ

ಬೆಂಗಳೂರು: ನಾನು ಆರೂವರೆ ಕೋಟಿ ಜನರ ಮುಲಾಜಿನಲಿಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾನುವಾರ ತಿಳಿಸಿದರು.

ಒಂದು ವೇಳೆ ಸಾಲ ಮನ್ನಾ ಮಾಡದಿದ್ದರೆ ರಾಜೀನಾಮೆ ಕೊಡುತ್ತೇನೆ., ಯಾರೂ ಸಹ ರಾಜಿನಾಮೆ ಕೊಡಿ ಎಂದು ಒತ್ತಡ ಹೇರುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಮಾಜಿ ಪ್ರಧಾನಿ ಪಂಡಿತ್ ನೆಹರೂರವರ 54 ನೇ ಪುಣ್ಯತಿಥಿ ಅಂಗವಾಗಿ ನೆಹರೂ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಕುಮಾರಸ್ವಾಮಿ ಸುದ್ದಿಗಾರರ ಜೊತೆ ಮಾತನಾಡಿದರು. 

ರೈತರ ಸಾಲ ಮನ್ನಾ ವಿಚಾರದಲ್ಲಿ ನನಗೆ ಒಂದು ವಾರ ಕಾಲಾವಕಾಶ ಕೊಡಿ, ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಅವರು ಮನವಿ ಮಾಡಿದರು.

ರೈತ ಸಂಘಟನೆಗಳು ನನಗೆ ಒತ್ತಡ ತರುವುದು ಬೇಡ. ಚುನಾವಣೆ ಸಂದರ್ಭದಲ್ಲಿ ರೈತ ಸಂಘಟನೆಯವರು ಯಾರ್ಯಾರು ಏನೇನು ಮಾಡಿದ್ದಾರೆ ಅಂತ ನನಗೆ ಗೊತ್ತು, ನಾನು ಕುರ್ಚಿಗೆ ಅಂಟಿಕೊಂಡು ಕೂರುವವನಲ್ಲ‌ ಎಂದರು.  ಯಡಿಯೂರಪ್ಪ ರೈತರ ಆತ್ಮಹತ್ಯೆಗೆ ಪ್ರಚೋದನೆ ಮಾಡುವುದು ಬೇಡ. ಅವರಿಗೆ ಸಣ್ಣ ಮಾನವೀಯತೆ ಬೇಡವೇ? ನಮ್ಮ ಮಾತಿನಿಂದ ರೈತ ಕುಟುಂಬಗಳು ಕಂಗಾಲಾಗಿ ರೈತರ ಮಕ್ಕಳು ಅನಾಥರಾದರೆ ಯಾರು ಗತಿ? ಎಂದರು.

ನಿಮ್ಮಲ್ಲಿ ನಾನೂ ಒಬ್ಬ, ರೈತರು ಕಂಗಾಲಾಗುವ ಅವಶ್ಯಕತೆ ಇಲ್ಲ. ಒಂದು ವಾರ ಸಮಯ ಕೊಡಿ ಎಂದು ರೈತರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ನವರು ಹಣಕಾಸು ಖಾತೆ ಕೇಳುತ್ತಿದ್ದಾರೆ,  ಸಂಪುಟ ರಚನೆ ಸಂದರ್ಭದಲ್ಲಿ ಪ್ರಮುಖ ಖಾತೆಗಳನ್ನು ಕೇಳುವುದು ಸಹಜ. ಇನ್ನೂ ಈ ಬಗ್ಗೆ ತೀರ್ಮಾನ ಆಗಬೇಕಿದೆ. ಪ್ರಮುಖ ಖಾತೆಗಳ ಹಂಚಿಕೆಯಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಕೆಲವೊಂದು ಖಾತೆಗಳನ್ನು ಕೇಳೋದು ಸಾಮಾನ್ಯ. ಇದರಲ್ಲಿ ಯಾವುದೇ ರೀತಿಯ ಫೈಟ್ ಇಲ್ಲ ಎಂದರು.  ಸೋಮವಾರ ದೆಹಲಿಗೆ ತೆರಳಿ ಪ್ರಧಾನಿ ಭೇಟಿ ಮಾಡಲಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry