ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿವಿ ಕೀರ್ತಿ ಹೆಚ್ಚಿಸಿದ ಬೀಜಕೇಂದ್ರ

ಮುಂಗಾರು ಬೀಜ ದಿನೋತ್ಸವದಲ್ಲಿ ಗುತ್ತಿ ಜಂಬುನಾಥ ಹೇಳಿಕೆ
Last Updated 27 ಮೇ 2018, 11:22 IST
ಅಕ್ಷರ ಗಾತ್ರ

ರಾಯಚೂರು: ‘ಬೀಜ ಘಟಕದ ವಿಜ್ಞಾನಿಗಳು ಮತ್ತು ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡುವ ಮೂಲಕ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೀರ್ತಿಯನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸಿದ್ದಾರೆ’ ಎಂದು ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಗುತ್ತಿ ಜಂಬುನಾಥ ಹೇಳಿದರು.

ವಿಶ್ವವಿದ್ಯಾಲಯದ ಬೀಜ ಘಟಕದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ‘ಮುಂಗಾರು ಬೀಜ ದಿನೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೀಜ ಘಟಕವು ತುಂಬಾ ಪ್ರಶಂಸೆ ತಂದು ಕೊಡುತ್ತಿದೆ. ಆರಂಭದಲ್ಲಿ 2,500 ಕ್ವಿಂಟಲ್‌ ಬೀಜಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಒಂದು ದಶಕದಲ್ಲಿ ಬೀಜ ಉತ್ಪಾದನೆ ಸಾಮರ್ಥ್ಯವನ್ನು 50 ಸಾವಿರ ಕ್ವಿಂಟಲ್‌ಗೆ ಹೆಚ್ಚಿಸಿಕೊಂಡಿದೆ. ತುಂಬಾ ಸ್ಪಂದನಾಶೀಲ ಆಡಳಿತವನ್ನು ಘಟಕವು ಹೊಂದಿರುವುದು ಗಮನಾರ್ಹ ಎಂದರು.

ಘಟಕದ ಅಭಿವೃದ್ಧಿಗೆ ಅಗತ್ಯ ನೆರವನ್ನು ವಿಶ್ವವಿದ್ಯಾಲಯದಿಂದ ಒದಗಿಸಲಾಗುವುದು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಿನದ ಎಲ್ಲಾ ಸಮಯದಲ್ಲೂ ಕಾರ್ಯನಿರ್ವಹಿಸುವುದಕ್ಕೆ ಬೇಕಾಗುವ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಐ. ಶಂಕರಗೌಡ ಮಾತನಾಡಿದರು.

ರೋಗ ತಡೆಗೆ ಕ್ರಮ ಅಗತ್ಯ

‘ಬಿಟಿ ಹತ್ತಿಯಿಂದ ಸಾಕಷ್ಟು ಜನರು ಚರ್ಮರೋಗಕ್ಕೆ ತುತ್ತಾಗುತ್ತಿದ್ದಾರೆ. ಹೊಸದಾಗಿ ಬಿಟಿ–3 ಹತ್ತಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಹತ್ತಿಯಿಂದ ರೋಗ ಬರದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ಹಸಿರುಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಘಟಕದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು.

ದೇಶದಲ್ಲಿ ವಿಜ್ಞಾನಿಗಳು ಮತ್ತು ರೈತರ ಶ್ರಮದಿಂದ ಹಸಿರುಕ್ರಾಂತಿ ಸಾಧಿಸಲು ಸಾಧ್ಯವಾಗಿದೆ. ರೈತರು ಕೃಷಿ ವಿವಿ ಸಂಪರ್ಕಿಸಿ ಸಲಹೆ ಪಡೆದುಕೊಂಡರೆ, ಹೆಚ್ಚಿನ ಲಾಭ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿಜ್ಞಾನಿಗಳು ಕೂಡಾ ಸಂಶೋಧನೆಗಳನ್ನು ರೈತರ ಜಮೀನಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

₹50 ಕೋಟಿ ಲಾಭ

ಒಂದೇ ಕಡೆ ಇದ್ದ ಬೀಜ ಘಟಕವನ್ನು ವಿಕೇಂದ್ರಿಕರಣ ಮಾಡಲಾಗಿದ್ದು, 10 ಕಡೆಗಳಲ್ಲಿ ಬೀಜ ಉತ್ಪಾದನೆ ಮಾಡಲಾಗುತ್ತಿದೆ. ಈ ವರ್ಷ 9 ನೇ ಮುಂಗಾರು ಬೀಜ ದಿನೋತ್ಸವ ಆಚರಿಸಲಾಗುತ್ತಿದೆ. ಇಲ್ಲಿಯವರೆಗೂ ವಿಭಾಗದ ಅಭಿವೃದ್ಧಿಗಾಗಿ ಒಟ್ಟು ₹17 ಕೋಟಿ ಅನುದಾನ ಬಂದಿದೆ. ಇದೇ ಅವಧಿಯಲ್ಲಿ ಬೀಜ ಘಟಕವು ಕೈಗೊಂಡ ಸಂಶೋಧನೆ ಮತ್ತು ಬೀಜ ಉತ್ಪಾದನೆಯಿಂದಾಗಿ ಕನಿಷ್ಠ ₹50 ಕೋಟಿ ಹೆಚ್ಚುವರಿ ಲಾಭವನ್ನು ರೈತ ಸಮೂಹಕ್ಕೆ ಬೀಜ ಘಟಕವು ತಂದುಕೊಟ್ಟಿದೆ ಎಂದು ಬೀಜ ಘಟಕದ ವಿಭಾಗದ ಮುಖ್ಯಸ್ಥ ಡಾ.ಬಸವೇಗೌಡ ಹೇಳಿದರು.

**

ಮದುವೆಗೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳುವ ರೈತರು; ಆದಾಯ ಕೊಡುವ ಜಮೀನಿನಲ್ಲಿ ಏನು ಬೆಳೆಯಬೇಕು, ಹೇಗೆ ಬೆಳೆಯಬೇಕು ಎನ್ನುವ ಪೂರ್ವ ತಯಾರಿ ಮಾಡಿಕೊಳ್ಳುವುದಿಲ್ಲ
– ಡಾ.ಬಸವೇಗೌಡ, ಬೀಜ ಘಟಕದ ಮುಖ್ಯಸ್ಥ, ರಾಯಚೂರು ಕೃಷಿ ವಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT