6
ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೆ ‘ಚಿಣ್ಣರ ಚಿಲುಮೆ’ ನಾಟಕ ಕಾರ್ಯಾಗಾರ

ಮೇಲುಕೋಟೆ: ‘ನಮ್ಮ ಗಾಂಧಿ ಜಯಂತಿ’ ನಾಟಕ ಇಂದು

Published:
Updated:
ಮೇಲುಕೋಟೆ: ‘ನಮ್ಮ ಗಾಂಧಿ ಜಯಂತಿ’ ನಾಟಕ ಇಂದು

ಪಾಂಡವಪುರ/ಮೇಲುಕೋಟೆ: ಇಲ್ಲಿನ ದೃಶ್ಯ ಟ್ರಸ್ಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜನಪದ ಸೇವಾ ಟ್ರಸ್ಟ್‌ಗಳ ಸಹಕಾರದೊಂದಿಗೆ ಮೇ 27ರಂದು ಸಂಜೆ 6.30ಕ್ಕೆ ‘ನಮ್ಮ ಗಾಂಧಿ ಜಯಂತಿ’ ನಾಟಕ ಪ್ರದರ್ಶನಗೊಳ್ಳಲಿದೆ.

ಮೇಲುಕೋಟೆಯ ಡಾ.ಪು.ತಿ.ನ ಕಲಾಮಂದಿರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ರಂಗಕರ್ಮಿ ಎಚ್.ಜನಾರ್ದನ್‌ (ಜನ್ನಿ) ಉದ್ಫಾಟಿಸುವರು. ಪರಿಸರವಾದಿ ಸಂತೋಷ್‌ ಕೌಲಗಿ ಅತಿಥಿಗಳಾಗಿ ಭಾಗವಹಿಸುವರು. ದೃಶ್ಯ ಟ್ರಸ್ಟ್‌ನ ಅಧ್ಯಕ್ಷ ಕೆ.ಆರ್.ಹೇಮಂತಕುಮಾರ್‌ ಪ್ರಸ್ತಾವ ಭಾಷಣ ಮಾಡಲಿದ್ದಾರೆ.

ಆರ್.ಪವನ್‌ ಕುಮಾರ್ ರಚಿಸಿರುವ ‘ನಮ್ಮ ಗಾಂಧಿ ಜಯಂತಿ’ ನಾಟಕವನ್ನು ಕೆ.ಆರ್.ಗಿರೀಶ್‌ ಅವರು ವಿನ್ಯಾಸಗೊಳಿಸಿ, ರಂಗರೂಪಕ್ಕೆ ಇಳಿಸಿದ್ದಾರೆ. ಬೇಸಿಗೆ ರಜೆಯಲ್ಲಿ ಮೇಲುಕೋಟೆಯ ಶಾಲಾ ಮಕ್ಕಳಿಗೆ ‘ಚಿಣ್ಣರ ಚಿಲುಮೆ–ನಾಟಕ ಕಾರ್ಯಾಗಾರ’ವನ್ನು ನಡೆಸಲಾಗಿತ್ತು.

20 ದಿನಗಳ ಕಾಲ ನಡೆದ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 25 ಮಕ್ಕಳಿಗೆ ನಾಟಕ, ಪರಿಸರ ಅಧ್ಯಯನ, ಒಳಾಂಗಣ ಮತ್ತು ಹೊರಾಂಗಣ ಆಟಗಳು, ನಾಟಕ ಪ್ರವಾಸ ಸೇರಿದಂತೆ ಹಲವು ಬಗೆಯ ತರಬೇತಿ ನೀಡಲಾಯಿತು. ಇದರೊಂದಿಗೆ ಆರ್.ಪವನ್‌ಕುಮಾರ್ ಬರೆದಿರುವ ‘ನಮ್ಮ ಗಾಂಧಿ ಜಯಂತಿ’ ನಾಟಕವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ದೃಶ್ಯ ಟ್ರಸ್ಟ್‌ನ ಕೆ.ಆರ್.ಗಿರೀಶ್‌ ಅವರು ನಿರ್ದೇಶಿಸಿದ್ದಾರೆ. ಇವರಿಗೆ ಚಿಂತಕ ಸುಘೋಷ್‌ ಕೌಲಗಿ ಸಾಥ್ ನೀಡಿದ್ದಾರೆ.

ಮೇ 27ರಂದು ನಾಟಕ ಪ್ರದರ್ಶನಗೊಂಡ ನಂತರ ಹಲವು ಹಳ್ಳಿಗಳಲ್ಲಿ ನಾಟಕ ಪ್ರದರ್ಶಿಸಲು ಆಲೋಚಿಸಲಾಗಿದೆ. ಮಕ್ಕಳ ಶಾಲಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ವರ್ಷವಿಡಿ ಮಕ್ಕಳನ್ನು ನಾಟಕದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತದೆ. ಆ ಮೂಲಕ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತಂದು ಕ್ರಿಯಾಶೀಲಗೊಳಿಸುವ ಆಲೋಚನೆ ಇದೆ ಎಂದು ನಾಟಕ ನಿರ್ದೇಶಕ ಗಿರೀಶ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry