ಮತದಾರರ ಪಟ್ಟಿ ಪರಿಷ್ಕರಣೆಗೆ ಸೂಚನೆ

7
ಸೆ.16ಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರ ಮುಕ್ತಾಯ

ಮತದಾರರ ಪಟ್ಟಿ ಪರಿಷ್ಕರಣೆಗೆ ಸೂಚನೆ

Published:
Updated:

ಕೊಟ್ಟೂರು: ನಗರ, ಸ್ಥಳೀಯ ಸಂಸ್ಥೆಗಳ ಅಧಿಕಾರ ಅವಧಿ ಮುಗಿಯುತ್ತಿದ್ದು, ಮತದಾರ ಪಟ್ಟಿ ಸಿದ್ಧತೆ ಮತ್ತು ವೀಕ್ಷಕರ ನೇಮಕ ಕುರಿತು ರಾಜ್ಯ ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸಿದೆ.

ಕೊಟ್ಟೂರು ಪಟ್ಟಣ ಪಂಚಾಯ್ತಿ ಅಧಿಕಾರ ಸೆ.16ಕ್ಕೆ ಮುಗಿಯುವುದರಿಂದ ಮತದಾರ ಪಟ್ಟಿ ಮತ್ತು ವಾರ್ಡ್‌ಗಳ ವಿಗಂಡಣೆ ಹಾಗೂ ವೀಕ್ಷರನ್ನು ನೇಮಿಸುವ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ.

ಚುನಾವಣೆ ಸಿದ್ಧತೆಗಾಗಿ ಪಟ್ಟಣ ಪಂಚಾಯ್ತಿಯಲ್ಲಿ ಮುಖ್ಯಾಧಿಕಾರಿ, ಬಿಎಲ್‌ಒ, ಕರವಸೂಲಿದಾರರ ಸಭೆ ಸೋಮವಾರ ಕೂಡ್ಲಿಗಿ ತಹಶೀಲ್ದಾರ್ ನೇತೃತ್ವದಲ್ಲಿ ನಡೆಯಲಿದೆ.

ತಹಶೀಲ್ದಾರ್ ಕಚೇರಿಯಿಂದ ಪಟ್ಟಣ ಪಂಚಾಯ್ತಿಗೆ ಸಭೆ ನಡೆಸುವ ಸೂಚನಾ ಪತ್ರ ತಲುಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಾರ್ಡ್‌ವಾರು ಗಡಿ ಗುರುತಿಸುವುದು, ಮತದಾರರ ಕರಡು ಸಿದ್ಧಪಡಿಸುವುದು, ಮತದಾರರ ಪಟ್ಟಿಯ ಮುದ್ರಣಕ್ಕೆ ಮುದ್ರಕರನ್ನು ನಿಗದಿಗೊಳಿಸುವುದು ಸೇರಿದಂತೆ ಇತರೆ ವಿಷಯಗಳ ಕುರಿತು ಆಯೋಗಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ವಾರ್ಡ್‌ಗಳ ವಿಂಗಡಣೆ, ಮತದಾರರನ್ನು ಗುರುತಿಸುವಿಕೆ ಮೇ16ರಿಂದ20, ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮನೆಗಳಿಗೆ ಭೇಟಿ ನೀಡಿ ಮತದಾರರನ್ನು ಗುರುತಿಸಬೇಕು. ಪ್ರಥಮ ಚೆಕ್ ಲಿಸ್ಟ್ ಪರೀಶಿಲನೆ, ಕರಡು ಮತದಾರರ ಪಟ್ಟಿ ಪ್ರಕಟಣೆ,ಆಕ್ಷೇಪಣೆ ಸಲ್ಲಿಕೆ, ಆಕ್ಷೇಪಣೆ ಇತ್ಯರ್ಥ  ಹಾಗು ಅಂತಿಮ ಪಟ್ಟಿ ಪ್ರಕಟಣೆಗೆ ಆಯೋಗವು ದಿನಾಂಕ ನಿಗದಿಪಡಿಸಿದೆ. ಈ ಎಲ್ಲ ಕಾರ್ಯಗಳು ಕಂದಾಯ ಇಲಾಖೆ ಮತ್ತು ಪಟ್ಟಣ ಪಂಚಾಯ್ತಿ ಸಿಬ್ಬಂದಿ ಸಹಕಾರದೊಂದಿಗೆ ನಡೆಯಲಿದೆ.

ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವ ದಿನದಂದು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಭೆ ಕರೆದು ಮಾಹಿತಿ ನೀಡಿ ಒಂದು ಕರಡು ಪ್ರತಿ ನೀಡುವುದು. ಅಂತಿಮ ಮತದಾರರ ಪಟ್ಟಿಯನ್ನು ಮಾನ್ಯತೆ ಪಡೆದ ರಾಜ್ಯ ಮತ್ತು ರಾಷ್ಟ್ರೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry