ಒಂದೇ ಸೂರಿನಡಿ ದೊರೆಯದ ಕಂದಾಯ ಸೇವೆ

7
ಹೆಸರಿಗೆ ಮಾತ್ರ ತಾಲ್ಲೂಕು ಕೇಂದ್ರ; ತಪ್ಪದ ಅಲೆದಾಟ

ಒಂದೇ ಸೂರಿನಡಿ ದೊರೆಯದ ಕಂದಾಯ ಸೇವೆ

Published:
Updated:
ಒಂದೇ ಸೂರಿನಡಿ ದೊರೆಯದ ಕಂದಾಯ ಸೇವೆ

ಕಾರಟಗಿ: ತಾಲ್ಲೂಕು ಕೇಂದ್ರವಾಗಿ ಮೂರು ತಿಂಗಳು ಕಳೆದರೂ ವಿವಿಧ ಕೆಲಸ ಕಾರ್ಯಗಳಿಗೆ ಸಾರ್ವಜನಿಕರ ಅಲೆದಾಟ ಇನ್ನೂ ತಪ್ಪಿಲ್ಲ.

ನೂತನ ತಾಲ್ಲೂಕು ಘೋಷಣೆ ಯಾದ ಬಳಿಕ ವಿಶೇಷ ಎಪಿಎಂಸಿ ಕಟ್ಟಡದಲ್ಲಿ ತಾತ್ಕಾಲಿಕವಾಗಿ ತಹಶೀಲ್ದಾರ ಕಚೇರಿ ಆರಂಭಿಸಲಾಯಿತು. ಅಧಿಕಾರಿ ಗಳು ನೂತನ ಕಚೇರಿಯಲ್ಲಿರುತ್ತಾರೆ. ಜನರು ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್‌ ಸೇರಿದಂತೆ ವಿವಿಧ ಕಂದಾಯ ಇಲಾಖೆಯ ಕೆಲಸಗಳಿಗೆ  ಒಂದು ಕಿಲೋ ಮೀಟರ್‌ ದೂರದಲ್ಲಿರುವ ಹಳೆಯ ವಿಶೇಷ ತಹಶೀಲ್ದಾರ್‌ ಕಚೇರಿಗೆ  ಅಲೆದಾಡಬೇಕಿದೆ.

ತರಾತುರಿಯಲ್ಲಿ ಹೆಸರಿಗಷ್ಟೇ ತಹಶೀ ಲ್ದಾರ ಕಚೇರಿ ಆರಂಭವಾಗಿ ದ್ದರೂ ಇನ್ನೂ ಹೋಬಳಿ ವ್ಯಾಪ್ತಿಯ ಕೆಲಸ ಕಾರ್ಯಕ್ಕೆ ಮಾತ್ರ ಸೀಮಿತವಾಗಿದೆ.ತಾಲ್ಲೂಕಿನ ಸಿದ್ದಾಪುರ ಹೋಬಳಿಯ ಯಾವ ಮಾಹಿತಿಯೂ ಇಲ್ಲಿನ ತಹಶೀ ಲ್ದಾರ ಕಚೇರಿಯಲ್ಲಿ ದೊರೆಯುವುದಿಲ್ಲ.

ಅಟಲ್‌ ಜೀ ಕೇಂದ್ರ, ಪಹಣಿ ವಿತರಣಾ ಕೇಂದ್ರ ಇಂದಿಗೂ ನೂತನ ತಹಶೀಲ್ದಾರ ಕಚೇರಿಗೆ ಸ್ಥಳಾಂತರಗೊಂಡಿಲ್ಲ. ಸಿಬ್ಬಂದಿ ದಾಖಲೆಗಳ ಸಂಗ್ರಹ, ನೋಂದಾವಣೆಗಾಗಿ ಅಧಿಕಾರಿಗಳು ಅರ್ಧ ದಿನ ಕಚೇರಿಯಲ್ಲಿ, ಇನ್ನರ್ಧ ದಿನ ಹಳೆಯ ಕಚೇರಿಗೆ ತೆರಳಿ ತಂಬ್ ನೀಡಬೇಕಿದೆ. ಜನರಿಗಲ್ಲದೇ ಅಧಿಕಾರಿಗಳಿಗೆ ಅಲೆದಾಟ ತಪ್ಪುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಜಮೀನಿನ ಪಹಣಿ ಸಲುವಾಗಿ ವಾರದಿಂದ ಅಲೆದಾಡುತ್ತಿದ್ದೇನೆ. ಸರ್ವರ್ ಸಮಸ್ಯೆ ಮತ್ತಿತ್ತರ ಕಾರಣ ಹೇಳಿ ಜನರನ್ನು ವಾಪಸ್‌ ಕಳುಹಿಸಲಾಗುತ್ತಿದೆ. ಜನರು ಖಾಸಗಿ ಇಂಟರ್‌ನೆಟ್‌ ಸೆಂಟರ್‌ಗಳ ಮೊರೆ ಹೋಗುತ್ತಿದ್ದಾರೆ.ಅಲ್ಲದೇ ಯಾವ ಕೆಲಸವೂ ಆಗದೇ ನನೆಗುದಿಗೆ ಬೀಳುತ್ತಿವೆ ಎನ್ನುತ್ತಾರೆ ಬೂದಗುಂಪಾ ಗ್ರಾಮದ ರೈತ.

ಅಧಿಕಾರಿಗಳು ಹಾಗೂ ಸಾರ್ವಜನಿಕರ ಅಲೆದಾಟ ತಪ್ಪಿಸಲು ಜಿಲ್ಲಾಧಿಕಾರಿಗಳು ಗಮನಹರಿಸುತ್ತಿಲ್ಲ. ಜನರಿಗೆ ಉತ್ತಮ ಸೇವೆ ದೊರೆತು ಕೆಲಸ ಕಾರ್ಯಗಳು ಸಕಾಲಕ್ಕೆ ಆಗಲಿ ಎಂಬ ಆಶಯದಿಂದ ಆರಂಭಗೊಂಡ ತಹಶೀಲ್ದಾರ ಕಚೇರಿ ಜನರಿಗೆ ಪ್ರಯೋಜನವಾಗಿಲ್ಲ. ಒಂದೇ ಸೂರಿನಡಿ ಸೇವೆಗಳು ಜನರಿಗೆ ಸಿಗುವಂತಾಗುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಒತ್ತಾಯ.

**

ಅಟಲ್ ಜಿ ಕೇಂದ್ರ, ಭೂಮಿ ಕೇಂದ್ರದ ಸ್ಥಳಾಂತರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇವು ಸ್ಥಳಾಂತರವಾದರೆ ಜನರ ಅಲೆದಾಟ ಸಹಜವಾಗಿ ತಪ್ಪುತ್ತದೆ. ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ದೊರೆಯಲಿದೆ

- ವಿಜಯಕುಮಾರ, ತಹಶೀಲ್ದಾರ, ಕಾರಟಗಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry