ಕಠಿಣ ಶಿಕ್ಷೆಯಾಗಲಿ

7

ಕಠಿಣ ಶಿಕ್ಷೆಯಾಗಲಿ

Published:
Updated:

‘ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ: ಜಾಗೃತಿ ಮೂಡಿಸುವುದು ಅಗತ್ಯ’ (ಪ್ರ.ವಾ., ಸಂಪಾದಕೀಯ, ಮೇ 26) ಬರಹ ಇತ್ತೀಚೆಗೆ ನಡೆದಿರುವ ಘಟನೆಗಳ ತೀವ್ರತೆಯನ್ನು ಕಟ್ಟಿಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುವ ಸುದ್ದಿಗಳನ್ನು ನಂಬಿ, ಕೆಲವರು ಬುದ್ಧಿಶೂನ್ಯರಾಗಿ ವರ್ತಿಸುತ್ತಿದ್ದಾರೆ. ಇದು, ಸಾಮಾಜಿಕ ಜಾಲತಾಣಗಳ ದುರುಪಯೋಗದ ಫಲ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಹ ವಿಕಾರವಾದಿಗಳನ್ನು, ಜಾಲತಾಣಗಳ ಮೂಲಕ ಹರಿಬಿಡುವ ವಿಕೃತಿಯನ್ನು ಪ್ರಚೋದಿಸುವ ವ್ಯಕ್ತಿಗಳನ್ನು ಹುಡುಕಿ ಕಠಿಣ ಶಿಕ್ಷೆ ವಿಧಿಸಬೇಕು.

ಸೈಬರ್ ಕ್ರೈಂ ವಿಭಾಗ ಈ ನಿಟ್ಟಿನಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಇಂತಹ ಪೈಶಾಚಿಕ ಕೃತ್ಯಗಳಿಂದಾಗಿ ಜನಸಾಮಾನ್ಯರು ಜೀವಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಘಟನೆಗಳು ನಾಗರಿಕ ಸಮಾಜಕ್ಕೆ ಶೋಭೆ ತರುವಂಥವುಗಳಲ್ಲ.

-ಧರ್ಮಾನಂದ ಶಿರ್ವ, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry