ಪತಿಯ ವೇತನ ವಿವರ ತಿಳಿಯುವ ಹಕ್ಕು ಪತ್ನಿಗಿದೆ

7

ಪತಿಯ ವೇತನ ವಿವರ ತಿಳಿಯುವ ಹಕ್ಕು ಪತ್ನಿಗಿದೆ

Published:
Updated:
ಪತಿಯ ವೇತನ ವಿವರ ತಿಳಿಯುವ ಹಕ್ಕು ಪತ್ನಿಗಿದೆ

ಜಬಲ್ಪುರ, ಮಧ್ಯಪ್ರದೇಶ: ಪತಿಯ ವೇತನದ ಸಂಪೂರ್ಣ ವಿವರವನ್ನು ತಿಳಿಯುವ ಹಕ್ಕು ಪತ್ನಿಗೆ ಇದೆ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಹೇಳಿದೆ.

ಸುನೀತಾ ಜೈನ್‌ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಎಸ್.ಕೆ. ಸೇಠ್‌ ಹಾಗೂ ನಂದಿತಾ ದುಬೇ ಅವರನ್ನು ಒಳಗೊಂಡ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.

‘ಸುನೀತಾ ಪತಿ ಪವನ್‌ಕುಮಾರ್‌ ಜೈನ್‌ ಬಿಎಸ್‌ಎನ್‌ಎಲ್‌ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದು, ದೊಡ್ಡಮೊತ್ತದ ವೇತನವನ್ನು ಪಡೆಯುತ್ತಿದ್ದಾರೆ. ಸದ್ಯ, ಪತಿಯಿಂದ ದೂರವಾಗಿರುವ ಸುನೀತಾ ಅವರಿಗೆ ನಿರ್ವಹಣೆಗಾಗಿ ತಿಂಗಳಿಗೆ ಕೇವಲ ₹7,000 ನೀಡುತ್ತಿದ್ದಾರೆ’ ಎಂದು ಸುನೀತಾ ಪರ ವಾದ ಮಂಡಿಸಿದ ಕೆ.ಸಿ. ಘಿಲ್‌ದಿಯಾಲ್ ಪೀಠದ ಮುಂದೆ ಹೇಳಿದರು.

ಈ ಮೊದಲು, ಅಧೀನ ನ್ಯಾಯಾಲಯದಲ್ಲಿ ಸುನೀತಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸ ಲಾಗಿತ್ತು. ನಂತರ, ಅವರು ಪತಿಯ ವೇತನದ ವಿವರ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ಪವನ್‌ಕುಮಾರ್‌ ಅವರ ವೇತನದ ವಿವರ ನೀಡುವಂತೆ ಬಿಎಸ್‌ಎನ್‌ಎಲ್‌ ಮಾಹಿತಿ ಅಧಿಕಾರಿಗೆ ಆದೇಶಿಸಿತ್ತು. ಈ ಆದೇಶದ ವಿರುದ್ಧ ಪವನ್‌ಕುಮಾರ್‌ ಮಧ್ಯಪ್ರದೇಶ ಹೈಕೋರ್ಟ್‌ನ ಏಕಸದಸ್ಯ ಪೀಠದ ಮೊರೆ ಹೋಗಿದ್ದರು.

ನಂತರ, ಸುನೀತಾ ಹೈಕೋರ್ಟ್‌ನ ಈ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

* ಸುನೀತಾ ಜೈನ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಪೀಠ, ‘ಪತ್ನಿಯನ್ನು ಮೂರನೇ ವ್ಯಕ್ತಿಯಂತೆ ಪರಿಗಣಿಸುವಂತಿಲ್ಲ’ ಎಂದು ಹೇಳಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry