ಗಾಯಗೊಂಡ ಜಿಂಕೆ ರಕ್ಷಣೆ

7

ಗಾಯಗೊಂಡ ಜಿಂಕೆ ರಕ್ಷಣೆ

Published:
Updated:
ಗಾಯಗೊಂಡ ಜಿಂಕೆ ರಕ್ಷಣೆ

ಹೊಸಕೋಟೆ: ತಾಲ್ಲೂಕಿನ ಬನಹಳ್ಳಿ ಬಳಿ ಭಾನುವಾರ ಬೆಳಿಗ್ಗೆ ಅಪಘಾತಕ್ಕೆ ತುತ್ತಾಗಿ ಗಾಯಗೊಂಡು ರಸ್ತೆಯ ಬದಿ ಬಿದ್ದಿದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

ಆಹಾರ ಅರಸಿ ರಾತ್ರಿ ಹೊತ್ತು ಗ್ರಾಮದ ಬಳಿ ಬಂದ ಸುಮಾರು 5 ವರ್ಷದ ಜಿಂಕೆ ರಸ್ತೆ ದಾಟುವಾಗ ವಾಹನವೊಂದು ಡಿಕ್ಕಿ ಹೊಡೆದಿದ್ದು, ಅದರ ಬೆನ್ನಿನ ಭಾಗಕ್ಕೆ ತೀವ್ರ ಗಾಯವಾಗಿತ್ತು.

ನಂದಗುಡಿಯ ಪಶು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಯಿತು ಎಂದು ಗ್ರಾಮಸ್ಥರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry