ಬಿಜೆಪಿ ಟಿಕೆಟ್‌ಗಾಗಿ ಭೋಜನಕೂಟ; ಎಫ್‌ಐಆರ್‌

7

ಬಿಜೆಪಿ ಟಿಕೆಟ್‌ಗಾಗಿ ಭೋಜನಕೂಟ; ಎಫ್‌ಐಆರ್‌

Published:
Updated:

ಬೆಂಗಳೂರು: ಜಯನಗರದ ಮೂರನೇ ಹಂತದಲ್ಲಿರುವ ‘ಪೈ ವೈಸ್‌ ರಾಯ್‌’ ಹೋಟೆಲ್‌ನಲ್ಲಿ ಸಾಮೂಹಿಕ ಭೋಜನ ಕೂಟ ಆಯೋಜಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಪಾಲಿಕೆ ಸದಸ್ಯ ಎನ್‌.ನಾಗರಾಜ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಪ್ರಕರಣ ಸಂಬಂಧ ಜಯನಗರ ಕ್ಷೇತ್ರದ ಸಂಚಾರ ದಳದ ಅಧಿಕಾರಿ ಬಿ.ಬಿ.ಬೋರಿ ದೂರು ನೀಡಿದ್ದರು. ಅದರನ್ವಯ ನಾಗರಾಜ್‌ ಹಾಗೂ ಅವರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವಿಚಾರಣೆಗೆ ಹಾಜರಾಗುವಂತೆ ಸದ್ಯದಲ್ಲೇ ನೋಟಿಸ್‌ ನೀಡಲಿದ್ದೇವೆ ಎಂದು ಜಯನಗರ ಠಾಣೆಯ ಪೊಲೀಸರು ತಿಳಿಸಿದರು.

‘ನಾಗರಾಜ್ ಅವರು, ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಿ ಬಿ ಫಾರ್ಮ್‌ ಪಡೆಯುವ ಉದ್ದೇಶದಿಂದಲೇ ಪಕ್ಷದ ಕೆಲ ಮುಖಂಡರನ್ನು ಆಹ್ವಾನಿಸಿ ಮೇ 22ರಂದು ಭೋಜನ ಕೂಟ ಆಯೋಜಿಸಿದ್ದರು. ಅದಕ್ಕೆ ಚುನಾವಣಾ ಅಧಿಕಾರಿಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಹೀಗಾಗಿ, ಹೋಟೆಲ್‌ ಮೇಲೆ ಸಂಚಾರ ದಳದ ಅಧಿಕಾರಿಗಳು ದಾಳಿ ಮಾಡಿದ್ದರು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry