ಚಿತ್ರದುರ್ಗದಲ್ಲಿ ಬಂದ್‌‍ಗೆ ಮಿಶ್ರ ಪ್ರತಿಕ್ರಿಯೆ

7

ಚಿತ್ರದುರ್ಗದಲ್ಲಿ ಬಂದ್‌‍ಗೆ ಮಿಶ್ರ ಪ್ರತಿಕ್ರಿಯೆ

Published:
Updated:
ಚಿತ್ರದುರ್ಗದಲ್ಲಿ ಬಂದ್‌‍ಗೆ ಮಿಶ್ರ ಪ್ರತಿಕ್ರಿಯೆ

ಚಿತ್ರದುರ್ಗ: ಬಿಜೆಪಿ ಕರೆ ನೀಡಿದ ಬಂದ್ ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ.

ಸೋಮವಾರ ಬೆಳಿಗ್ಗೆ ಎಂದಿನಂತೆ ಜನಜೀವನ ಸಹಜವಾಗಿತ್ತು. ಅಂಗಡಿಗಳು ಬಾಗಿಲು ತೆರೆದಿದ್ದವು. ಗಾಂಧಿ ವೃತ್ತಕ್ಕೆ ಧಾವಿಸಿದ ಪ್ರತಿಭಟನಾಕಾರರು ಅಂಗಡಿ ಬಾಗಿಲು ಮುಚ್ಚಿಸುವಂತೆ ಮನವಿ ಮಾಡಿದರು. ವಾಹನಗಳನ್ನು ತಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬೀದಿಗೆ ಇಳಿದಿದ್ದಾರೆ. ಪಿ.ಬಿ.ರಸ್ತೆಯಲ್ಲಿ ಸಾಗುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನ ಸಂಚಾರ ಸಹಜವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry