ಐಪಿಎಲ್‌ ಫ್ಯಾನ್‌ ಪಾರ್ಕ್‌ನಲ್ಲಿ ಸಿಡಿಲು: ಪೊಲೀಸ್‌ಗೆ ಗಾಯ

7

ಐಪಿಎಲ್‌ ಫ್ಯಾನ್‌ ಪಾರ್ಕ್‌ನಲ್ಲಿ ಸಿಡಿಲು: ಪೊಲೀಸ್‌ಗೆ ಗಾಯ

Published:
Updated:

ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ಭಾನುವಾರ ರಾತ್ರಿ ಆಯೋಜಿಸಲಾಗಿದ್ದ ಐಪಿಎಲ್‌ ಫ್ಯಾನ್‌ ಪಾರ್ಕ್‌ ಸ್ಥಳದಲ್ಲಿ ಸಿಡಿಲು ಬಡಿದು ಪೊಲೀಸ್‌ ಸಿಬ್ಬಂದಿ ಸಿದ್ದಪ್ಪಾಜಿ (30) ಗಾಯಗೊಂಡಿದ್ದಾರೆ.

ರಾತ್ರಿ 7.30ರ ಸುಮಾರಿಗೆ ಗುಡುಗು ಸಹಿತ ಮಳೆ ಆರಂಭವಾಗಿತ್ತು. 8ರ ಸುಮಾರಿಗೆ ಸಿಡಿಲು ಬಡಿದು ಈ ದುರಂತ ಸಂಭವಿಸಿತು. ಇದರಿಂದಾಗಿ ಐಪಿಎಲ್‌ ಫ್ಯಾನ್‌ ಫಾರ್ಕ್‌ನಲ್ಲಿ ಫೈನಲ್‌ ಪಂದ್ಯವನ್ನು ಸವಿಯುವ ಹಲವರ ಆಸೆ ಕೈಗೂಡಲಿಲ್ಲ.

ಈ ಮಧ್ಯೆ, ಸುರಿದ ಕುಂಭದ್ರೋಣ ಮಳೆಗೆ ನಗರದ ರಸ್ತೆಗಳೆಲ್ಲ ಜಲಾವೃತಗೊಂಡವು. ನಿರಂತರ ಸಿಡಿಲ ಆರ್ಭಟಕ್ಕೆ ನಗರದ ಜನತೆ ಅಳುಕಿ ಮನೆಯ ವಿದ್ಯುತ್‌ ಸಂಪರ್ಕ ಕಡಿತ ಮಾಡಿದರು.

ಭಾನುವಾರವಾದ್ದರಿಂದ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆಯಾಗಿತ್ತು. ಆದರೂ ತಗ್ಗು ಪ್ರದೇಶಗಳು, ಕಾಂಕ್ರೀಟ್‌ ರಸ್ತೆಗಳಲ್ಲಿ ಬೃಹತ್‌ ಪ್ರಮಾಣದ ನೀರು ಹರಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಸುಮಾರು ಒಂದು ಗಂಟೆ ಕಾಲ ನಿರಂತರ ಗುಡುಗು ಮಿಂಚಿನ ಮಳೆ ಸುರಿಯಿತು. ಜಿಲ್ಲೆಯ ಮತ್ತು ನಗರದ ಕೆಲವೆಡೆ ಮರಗಳ ಟೊಂಗೆಗಳು ಮುರಿದು ಬಿದ್ದು ರಸ್ತೆ ಸಂಚಾರಕ್ಕೆ ತೊಡಕಾಯಿತು. ಬಳಿಕ  ಮಳೆ, ಗುಡುಗಿನ ರಭಸ ಕಮ್ಮಿಯಾದರೂ ತಡರಾತ್ರಿಯವರೆಗೂ ಮಳೆ ಮುಂದುವರಿದಿತ್ತು.

ಹಲವು ಕಡಲ ತೀರಗಳಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry