ಜಿಲ್ಲಾಮಟ್ಟದ ತಂಡ ಆಯ್ಕೆಗೆ ಪ್ರೊ ಕಬಡ್ಡಿ

7
ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಸಹಯೋಗ

ಜಿಲ್ಲಾಮಟ್ಟದ ತಂಡ ಆಯ್ಕೆಗೆ ಪ್ರೊ ಕಬಡ್ಡಿ

Published:
Updated:
ಜಿಲ್ಲಾಮಟ್ಟದ ತಂಡ ಆಯ್ಕೆಗೆ ಪ್ರೊ ಕಬಡ್ಡಿ

ಲಿಂಗಸುಗೂರು: ರಾಜ್ಯ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಮತ್ತು ತಾಲ್ಲೂಕು ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಸಹಯೋಗದಲ್ಲಿ ಶನಿವಾರ ತಾಲ್ಲೂಕಿನ ಈಚನಾಳ ಗ್ರಾಮದಲ್ಲಿ ಬಾಲಕರ ಕಿರಿಯರ ಜಿಲ್ಲಾ ಮಟ್ಟದ ತಂಡದ ಆಯ್ಕೆಗೆ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯಿತು.

ರಾಷ್ಟ್ರೀಯ ತೀರ್ಪುಗಾರ ಸಂಗಣ್ಣ ಬಾಗೇವಾಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ‘ಬಾಲಕರ ಕಿರಿಯರ (16 ರಿಂದ 20 ವರ್ಷದೊಳಗಿನ) ತಂಡದ ಆಯ್ಕೆಗೆ ತಾಲ್ಲೂಕಿನ 80ಕ್ಕೂ ಹೆಚ್ಚು ಬಾಲಕರು ನೋಂದಾಯಿಸಿದ್ದು, ಅವರ ವೈಯಕ್ತಿಕ ಪ್ರತಿಭೆ ಆಧರಿಸಿ ತಾಲ್ಲೂಕು ಮಟ್ಟದ ತಂಡಕ್ಕೆ ಆಯ್ಕೆ ಮಾಡಲು ಪಂದ್ಯಾವಳಿ ಆಯೋಜಿಸಲಾಗಿದೆ’ ಎಂದು ವಿವರಿಸಿದರು.

‘ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಅಡಿ ಹಿರಿಯರು, 16 ವರ್ಷದ ಒಳಗಿನ, 16 ರಿಂದ 20 ವರ್ಷದೊಳಗಿನ ಬಾಲಕ, ಬಾಲಕಿಯರ ಆಯ್ಕೆ ಪಂದ್ಯಾವಳಿ ನಡೆಯುತ್ತಿವೆ. ಈ ತಂಡಗಳ ಆಯ್ಕೆ ನಂತರ ಜಿಲ್ಲೆಯ ಎಲ್ಲಾ ತಾಲ್ಲೂಕು ತಂಡಗಳ ಜೊತೆ ಜಿಲ್ಲಾಮಟ್ಟದ ಆಯ್ಕೆ ಪಂದ್ಯಾವಳಿ ನಡೆಸಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿ ಜಿಲ್ಲಾ ತಂಡ ರಚಿಸಲಾಗುತ್ತಿದೆ’ ಎಂದರು.

ಅಮೆಚೂರ್‌ ಕಬಡ್ಡಿ ಅಸೋಸಿ ಯೇಷನ್‌ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಬಸವರಾಜ ನಂದಿಕೋಲಮಠ ಮಾತನಾಡಿ, ‘ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಪ್ರೋತ್ಸಾಹಿಸಲು ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ತಾಲ್ಲೂಕು ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಅಧ್ಯಕ್ಷ ಶಂಕರ ರಾಠೋಡ ಆಶಿಹಾಳತಾಂಡಾ, ಉಪಾಧ್ಯಕ್ಷ ರಾಮಣ್ಣ ನಾಯಕ ನರಕಲದಿನ್ನಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ಜಮಖಂಡಿ ಚಿತ್ತಾಪುರ, ಸಹ ಕಾರ್ಯದರ್ಶಿ ನಾಗಣ್ಣ ದ್ಯಾಪೂರ ಈಚನಾಳ, ಸಂಘಟನಾ ಕಾರ್ಯದರ್ಶಿ ಹನುಮಂತ ಯಲಗಟ್ಟಾ, ಖಜಾಂಚಿ ರವಿಜೆಟ್ಟಿ ಗುರುಗುಂಟಾ ಇದ್ದರು.

ಶಾಲಾ ಸುಧಾರಣ ಸಮಿತಿ ಅಧ್ಯಕ್ಷ ರವೀಂದರ, ಮುಖಂಡರಾದ ಸಿದ್ದಯ್ಯ ಪೂಜಾರಿ, ನಾಗನಗೌಡ ಪೊಲೀಸ್‌ ಪಾಟೀಲ್‌, ಅಮರಯ್ಯಸ್ವಾಮಿ, ಸಂಗಯ್ಯಸ್ವಾಮಿ ಹನುಮಂತಪ್ಪ ದ್ಯಾಪೂರ, ಭಕ್ಷು, ಇಮಾಮ್‌ಸಾಬ, ಮಸ್ತಾನಅಲಿ, ಹನುಮಂತ ಪೂಜಾರಿ ಪ್ರೊ ಕಬಡ್ಡಿ ಇದ್ದರು.

ತೀರ್ಪುಗಾರರಾರಾಗಿ ತಿಪ್ಪಣ್ಣ ರಾಠೋಡ, ಸಂಗಣ್ಣ ಬಾಗೇವಾಡಿ, ಅಶ್ವೀನ್‌ ದೇವದುರ್ಗ, ಬಸಪ್ಪಗೌಡ ದೇವದುರ್ಗ, ಶಂಕರಣ್ಣ ಮಾನ್ವಿ, ರವೀಂದ್ರ ಮಸ್ಕಿ, ದೇವಪ್ಪ ಲಿಂಗಸುಗೂರು, ಉರುಕುಂದಪ್ಪ ರಾಯಚೂರು, ಕರಿಯಪ್ಪ ಲಿಂಗಸುಗೂರು, ದೇವಪ್ಪ ರಾಯಚೂರು ಭಾಗವಹಿಸಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry