ಮಕ್ಕಳೇ, ಇಂಗ್ಲೀಷ್ ಮಾತನಾಡಲು ಕಲಿಯಿರಿ, ಪ್ರಾಪಂಚಿಕ ಜ್ಞಾನ ಬೆಳೆಸಿಕೊಳ್ಳಿ

7

ಮಕ್ಕಳೇ, ಇಂಗ್ಲೀಷ್ ಮಾತನಾಡಲು ಕಲಿಯಿರಿ, ಪ್ರಾಪಂಚಿಕ ಜ್ಞಾನ ಬೆಳೆಸಿಕೊಳ್ಳಿ

Published:
Updated:
ಮಕ್ಕಳೇ, ಇಂಗ್ಲೀಷ್ ಮಾತನಾಡಲು ಕಲಿಯಿರಿ, ಪ್ರಾಪಂಚಿಕ ಜ್ಞಾನ ಬೆಳೆಸಿಕೊಳ್ಳಿ

ಇಂಗ್ಲೀಷ್ ಜಾಗತಿಕ ಭಾಷೆ. ಇಂಗ್ಲೀಷ್‌ ಭಾಷೆ ಮಾತನಾಡಲು ಬಂದರೆ ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಬದುಕಿ ಬರಬಹುದು ಎಂಬ ಮಟ್ಟಿಗೆ ಜನರು ಇಂಗ್ಲೀಷ್ ಭಾಷೆಯ ಬಗ್ಗೆ ವ್ಯಾಮೋಹ ಹೊಂದಿದ್ದಾರೆ. ಕೊಂಚ ಯೋಚಿಸಿದರೆ ಪ್ರತಿಯೊಬ್ಬ ಮನುಷ್ಯ ಪ್ರಾದೇಶಿಕ ಭಾಷೆಯ ಜತೆಗೆ ಇಂಗ್ಲೀಷ್ ಜ್ಞಾನ ಹೊಂದಿರುವುದು ಅರಿವಿನ ವಿಸ್ತರಣೆಗೆ ಅನುಕೂಲ ಎಂದೆನಿಸುತ್ತದೆ.

ಹೌದು ಇಂಗ್ಲೀಷ್ ಭಾಷೆಯಲ್ಲಿನ ಪ್ರಯೋಜನ ಅರಿತ ದೆಹಲಿ ಶಾಲಾ ಮಕ್ಕಳು ದೆಹಲಿ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದಾಗ ಸರ್, ನಮಗೂ ಇಂಗ್ಲೀಷ್‌ನಲ್ಲಿ ಮಾತನಾಡಲು ಕಲಿಸಿಕೊಡಿ ಎಂಬ ಒಕ್ಕೊರಲ ಧ್ವನಿ ಕೇಳಿತಂತೆ. ಈ ಬಗ್ಗೆ ಟ್ವೀಟ್ ಮಾಡಿದ ಕೇಜ್ರಿವಾಲ್, ಸಾಮಾನ್ಯವಾಗಿ ಸರ್ಕಾರಿ ಶಾಲಾ ಮಕ್ಕಳು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಂದ ಬಂದವರಾಗಿರುತ್ತಾರೆ. ಇದು ಅವರ ಪ್ರಮುಖ ಬೇಡಿಕೆ ಎಂದು ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವಾರದಿಂದ ದೆಹಲಿ ಸರ್ಕಾರ ಪ್ರತಿ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಜಾರಿಗೆ ತಂದಿದೆ.

ಟೀಮ್ ಲೀಸ್ ಸರ್ವೀಸಸ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷ ಮನೀಷ್ ಸಬರವಾಲ್ ಬೇಡಿಕೆ ಏನು ಮತ್ತು ಹಿಂದುಳಿದ ವರ್ಗದವರರು ಸಾಮಾಜಿಕ ಸ್ಥಾನಮಾನ ಪಡೆಯುವಲ್ಲಿ ಇಂಗ್ಲೀಷ್ ಕಲಿಕೆ ಹೇಗೆ ಸಹಕಾರಿಯಾಗಲಿದೆ ಎಂದು ವಿವರಿಸಿದ್ದಾರೆ.

* ಇಂಗ್ಲೀಷ್ ಕಲಿಕೆ ಭಾರತದ ಬಡವರ್ಗದಲ್ಲಿ ಕೋಲಾಹಲ ಎಬ್ಬಿಸುತ್ತದೆಯೇ?
ಖಂಡಿತ. ಇದು ಕೇವಲ ಆರ್ಥಿಕವಾಗಿ ಹಿಂದುಳಿದ ವರ್ಗದವರಲ್ಲಿ ಮಾತ್ರವಲ್ಲ. ಸಾಮಾಜಿಕವಾಗಿ ಹಿಂದುಳಿದವರಲ್ಲಿಯೂ ಕೋಲಾಹಲ ಎಬ್ಬಿಸುತ್ತದೆ. ಉದಾಹರಣೆಗೆ ಆಂಧ್ರಪ್ರದೇಶ ಸೇರಿದಂತೆ ಭಾರತದಾದ್ಯಂತ ಸರ್ಕಾರಿ ಶಾಲೆ ಮಕ್ಕಳು ಇಂಗ್ಲೀಷ್ ಕಲಿಕೆಯ ಕಡೆಗೆ ಸಾಗಬೇಕು ಎಂಬುದು ದಲಿತ ಚಳುವಳಿ ನಡೆದಿದೆ. ಇದರಿಂದ ಇಂಗ್ಲೀಷ್ ಎಂಬುದು ಕೇವಲ ಭಾಷೆಯಾಗಿ ಉಳಿಯದೆ ವೃತ್ತಿಪರ ಕೌಶಲವಾಗಿಯೂ ಮುಂದುವರೆದಿದೆ ಎಂದು ತಿಳಿಯುತ್ತದೆ.

* ಕಾರಣ ಏನು? ಇಂಗ್ಲೀಷ್ ಕಲಿಕೆ ಆರ್ಥಿಕವಾಗಿ ಲಾಭ ತರುತ್ತದೆಯೇ ಅಥವಾ ಸಾಮಾಜಿಕವಾಗಿ ಬೆಳೆಯುವ ಇಂಗಿತವೇ?
ಭಾರತ ಬಹು ಭಾಷೆಗಳ ತಾಣ. ಹಾಗಾಗಿ ಯಾರು ಇಂಗ್ಲೀಷ್ ಭಾಷೆಯ ಜತೆಗೆ ಅನ್ಯ ಭಾಷೆಗಳಲ್ಲಿಯೂ ಸಂವಹನ ನಡೆಸುತ್ತಾರೋ ಅಂತಹ ಮಂದಿಗೆ ದೇಶದಾದ್ಯಂತ ಪ್ರಾಶಸ್ತ್ಯ ಸಿಗುತ್ತಿದೆ. ಅಂದಹಾಗೆ ಚೀನಾದಲ್ಲಿ ಉತ್ಪಾದನಾಧರಿತ ಉದ್ಯೋಗಗಳು ಹೆಚ್ಚಿದ್ದರೆ, ಭಾರತದಲ್ಲಿ ಸರಕು ಮತ್ತು ಸೇವಾಧಾರಿತ ಉದ್ಯೋಗಗಳಿಗೆ ಹೆಚ್ಚಿನ ಅವಕಾಶ ಇದೆ.

ಇಂಗ್ಲೀಷ್ ಇದೀಗ ಔದ್ಯೋಗಿಕ ಕೌಶಲವಾಗಿ ಬದಲಾಗಿದೆ. ಅಂದರೆ ಒಂದೇ ಕೆಲಸದಲ್ಲಿ ಇಬ್ಬರೂ ಪ್ರವೀಣರಾಗಿದ್ದರೂ ಯಾರು ತಮ್ಮ ಕೆಲಸದ ಕೌಶಲದ ಜತೆಗೆ ಇಂಗ್ಲೀಷ್ ಸಂವಹನದಲ್ಲಿ ಸಾಮರ್ಥ್ಯಗಳಿಸಿರುತ್ತಾರೋ ಅಂತಹ ವ್ಯಕ್ತಿಗಳಿಗೆ ಹೆಚ್ಚಿನ ಸಂಬಳ, ಸೌಲಭ್ಯಗಳು ದೊರೆಯುತ್ತಾ ಹೋಗುತ್ತಿವೆ. ಇದರಲ್ಲಿ ಕೆಲವು ಸಾಮಾಜಿಕ ಮೌಲ್ಯಗಳು ಕಂಡರೂ ಕೂಡ ಅದಕ್ಕಿಂತ ವೇತನ ಲಾಭಾಂಶಕ್ಕೆ ಹೆಚ್ಚಿನ ಮೌಲ್ಯವಿದೆ ಮತ್ತು ಔಪಚಾರಿಕ ಉದ್ಯೋಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀಳಲಿದೆ ಎಂಬುದು ಸತ್ಯ. 

* ಯಾವ ರೀತಿಯ ಉದ್ಯೋಗಗಳು ?
ಉದ್ಯೋಗಗಳನ್ನು ರೀತಿಯಾಗಿ ವಿಂಗಡಿಸಬಹುದು.
* ಕೃಷಿಯಾಧರಿತ–ಕೈಗಾರಿಕಾಧಾರಿತ
* ಗ್ರಾಮೀಣಾಧಾರಿತ–ನಗರಾಧಾರಿರ
* ಔಪಚಾರಿಕ ಮತ್ತು ಅನೌಪಚಾರಿಕ
* ಸ್ವ ಉದ್ಯೋಗ–ಸಂಬಳಾಧಾರಿತ ಉದ್ಯೋಗ
ಈ ಎಲ್ಲಾ ಉದ್ಯೋಗಗಳು ಮಾನವ ಮತ್ತು ಕಂಪ್ಯೂಟರ್ ಸೇವೆಯನ್ನು ಬಯಸುತ್ತದೆ. ನಾವು ಸಾಮಾನ್ಯ ಜನರಿಗಿಂದ ಗುಳೆ ಬಂದ ಜನರಿಗೆ ಉದ್ಯೋಗ ನೀಡಲಾಗುತ್ತದೆ. ಯಾವುದೇ ಲಾಭಾಂಶಕ್ಕೆ ತಲೆಕೆಡಿಸಿಕೊಳ್ಳದೆ ನೆಲೆನಿಂತ ಸ್ಥಳದಲ್ಲೇ ಉದ್ಯೋಗ ಪಡೆಯುವ ಜತೆ ಸಾಧನೆ ಮಾಡುವ ಇಚ್ಛೆ ಹೊಂದಿರುವ ಮಂದಿಗೆ 90% ಅಂತರ್ಜಾಲ ಸೇವೆಯ ಜತೆಗೆ ಎಲ್ಲಾ ಕಂಪ್ಯೂಟರ್ ಸೇವೆಗಳನ್ನು ಇಂಗ್ಲೀಷ್‌ನಲ್ಲೇ ಒದಗಿಸಲಾಗುತ್ತದೆ.

* ರಾಜ್ಯ ಸರ್ಕಾರಗಳು ಹಿಂದಿ ಹಾಗೂ ಇನ್ನಿತರ ಭಾಷೆಯ ಬಳಕೆಗೆ ಯಾಕೆ  ಮಾನ್ಯತೆ ನೀಡುತ್ತಿದೆ?
ರಾಜ್ಯಸರ್ಕಾರಗಳು ಮಾತೃಭಾಷೆ ಹಾಗೂ ಪರಂಪರೆಯ ನಾಶದಂತಹ ಬಹುಮುಖ್ಯ ಸಮಸ್ಯೆಗಳ ಹೊರತಾಗಿಯೂ ಇಂಗ್ಲೀಷ್‌ ಭಾಷೆಗೆ ಒತ್ತು ನೀಡುವಲ್ಲಿ ಗೊಂದಲಕ್ಕೀಡಾಗಿವೆ.ಭಾರತದಲ್ಲಿ ಸುಮಾರು 780 ಬಳಕೆ ಭಾಷೆಗಳಿವೆ. ಅದರಲ್ಲಿ 400 ಭಾಷೆಗಳು ಅವನತಿಯ ಹಂತಕ್ಕೆ ತಲುಪಿದ್ದು, ಇವುಗಳ ನಾಶಕ್ಕೆ ಆಸ್ಪದ ಕೊಡಬಾರದೆಂಬ ಉದ್ದೇಶದಿಂದ ಇನ್ನಿತರ ಭಾಷೆಗಳಿಗೆ ಒತ್ತು ನೀಡುತ್ತವೆ. ಹಿಂದಿ ಸಿನಿಮಾಗಳಿಂದಾಗಿ ಅವನತಿ ಅಂಚಿನಲ್ಲಿರುವ ಉರ್ದು ಭಾಷೆ ಸ್ವಲ್ಪ ಸುಧಾರಿಸಿಕೊಳ್ಳುತ್ತಿದೆ. ಹಾಗಾಗಿ ಇಂಗ್ಲೀಷ್ ಬಳಕೆಯಿಂದ ಅಪಾಯವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.

* ಮಕ್ಕಳ ಇಂಗ್ಲೀಷ್ ಜ್ಞಾನವನ್ನು ವಿಸ್ತರಿಸುವಲ್ಲಿ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆಯೇ?
ಕಲಿಕೆಯ ಮೊದಲ 4 ಕೌಶಲ್ಯಗಳೆಂದರೆ, ಓದುವುದು, ಬರೆಯುವುದು, ಕೇಳುವುದು, ಮಾತನಾಡುವುದು. ಹಾಗಾಗಿ ಈ ನಾಲ್ಕು ಹಂತಗಳನ್ನು ದಾಟಿದ ವ್ಯಕ್ತಿಯನ್ನು ಮಾತ್ರ ಸಾಕ್ಷರಸ್ಥ ಎನ್ನಲಾಗುತ್ತದೆ. ಹಾಗಾಗಿ ದೆಹಲಿ ಸರ್ಕಾರ ಹಮ್ಮಿಕೊಂಡಿರುವ 5 ನೇ ತರಗತಿಯ ನಂತರದ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಕಲಿಸುವ ಯೋಜನೆ ಹಾಗೂ  ಉದ್ಯೋಗಾಂಕ್ಷಿ ಯೋಜನೆಗಳು ಹೆಚ್ಚು ಮಕ್ಕಳನ್ನು ತಲುಪುದು ಬೇಸಿಗೆ ಶಿಬಿರಗಳಲ್ಲಿ. ಹಾಗಾಗಿ ಬೇಸಿಗೆ ಶಿಬಿರಗಳು ಇಂಗ್ಲೀಷ್ ಜ್ಞಾನ  ವೃದ್ಧಿಗೆ ಹೇಳಿ ಮಾಡಿಸಿದ ಸ್ಥಳ. ಆದರೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್‌ ಅನ್ನು ಎರಡನೇ ಭಾಷೆಯಾಗಿ ಜಾರಿಗೆ ತಂದಾಗ ಮಾತ್ರ ಸರ್ಕಾರದ ಈ ಯೋಜನೆ ಬಹುಕಾಲ ಬಹುಮಕ್ಕಳನ್ನು ತಲುಪಲು ಸಾಧ್ಯ. ಯಾವುದೇ ಭಾಷೆಯನ್ನು ಸರಾಗವಾಗಿ ಮಾತನಾಡಲು ಕಲಿಯಬೇಕಾದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇಂಗ್ಲೀಷ್ ಭಾಷೆ ಕಲಿಕೆ ಕಾಲೇಜುಗಳಿಗಿಂತ ಹೆಚ್ಚಾಗಿ ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕು. ಏಕೆಂದರೆ, ದೊಡ್ಡವರಾದ ಮೇಲೆ ಕಲಿಕೆ ಕಷ್ಟಕರವಾಗುತ್ತದೆ.

* ಅನ್ಯ ರಾಷ್ಟ್ರಗಳು ಮತ್ತು ಅಕಾಡೆಮಿ ಸಂಶೋಧನೆಗಳು ಬಹುಭಾಷತ್ವದ ಬಗ್ಗೆ ಹೇಗೆ ಆಲೋಚಿಸುತ್ತದೆ?
ಬಹುಭಾಷತ್ವವು  ಆರ್ಥಿಕ ಅಭಿವೃದ್ಧಿಯನ್ನು ಪ್ರೇರೇಪಿಸುವ ವೈವಿಧ್ಯತೆ ಹಾಗೂ ಅನ್ವೇಷಣೆ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಭಾಷೆಯ ಮಹತ್ವ ಅರಿತಲ್ಲಿ ಭಾಷೆಯನ್ನು ಸಜ್ಜುಗೊಳಿಸು, ನಿರ್ಮಿಸು, ನ್ಯಾಯ ಒದಗಿಸು, ಸಂಸ್ಕೃತಿಯನ್ನು ಬಿಂಬಿಸಲು ಸಹಕರಿಸು ಎಂಬ ನಾಣ್ನುಡಿಯಿದೆ. ನಿಜವಾಗಿಯೂ ಭಾಷೆ ಎಂಬುದು ರಾಷ್ಟ್ರದ ಪ್ರತೀಕ. ದ್ವಿಭಾಷೆಯ ಕಲಿಕೆ ಮಕ್ಕಳ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗಲಿದೆ. ಯಾವ ಮಕ್ಕಳು ಎರಡು ಮೂರು ಭಾಷೆಗಳಲ್ಲಿ ಪ್ರವೀಣರಾಗಿರುತ್ತಾರೋ ಯಾವುದೇ ಸಮಸ್ಯೆಗಳನ್ನು, ಅನಾಹುತಗಳನ್ನು ಸಲೀಸಾಗಿ ನಿಭಾಯಿಸಬಲ್ಲರು ಎಂದು ಸಂಶೋಧನೆ ಹೇಳುತ್ತದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry