7

‘ರಶೀದ್ ಪರಿಪೂರ್ಣ ಆಟಗಾರ’

Published:
Updated:
‘ರಶೀದ್ ಪರಿಪೂರ್ಣ ಆಟಗಾರ’

ಮುಂಬೈ: ಅಫ್ಗಾನಿಸ್ತಾನದ ಯುವ ಸ್ಪಿನ್ನರ್‌ ರಶೀದ್ ಖಾನ್ ಪರಿಪೂರ್ಣ ಆಟಗಾರ ಎಂದು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ ಅಭಿಪ್ರಾಯಪಟ್ಟರು.

ಟೂರ್ನಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ರಶೀದ್‌ ಸನ್‌ರೈಸರ್ಸ್ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದರು. ಟೂರ್ನಿಯಲ್ಲಿ ತಂಡ ರನ್ನರ್ ಅಪ್ ಆಗಿತ್ತು.

ಈಗ ರಶೀದ್ ಅವರ ಚಿತ್ತ ಮುಂದಿನ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ಮತ್ತು ಅಫ್ಗಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್‌ ಪಂದ್ಯದತ್ತ ಹರಿದಿದೆ. ಟೆಸ್ಟ್ ಕ್ರಿಕೆಟ್‌ನಲ್ಲೂ ಅವರು ಉತ್ತಮ ಸಾಧನೆ ಮಾಡಬಲ್ಲರು ಎಂಬುದು ಕೇನ್ ಅವರ ಭರವಸೆಯ ನುಡಿ.

‘ಮುಂದಿನ ತಿಂಗಳು ಅವರು ಟೆಸ್ಟ್ ಪಂದ್ಯ ಆಡಲು ಸಜ್ಜಾಗುತ್ತಿರುವುದು ಸಂತಸದ ವಿಷಯ. ರಶೀದ್ ಆ ಪಂದ್ಯದಲ್ಲಿ ಯಶಸ್ಸು ಗಳಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry