ವಂಚನೆ: ಸರ್ಕಾರಿ ಬ್ಯಾಂಕ್‌ಗಳಿಗೆ ನಷ್ಟ

7

ವಂಚನೆ: ಸರ್ಕಾರಿ ಬ್ಯಾಂಕ್‌ಗಳಿಗೆ ನಷ್ಟ

Published:
Updated:
ವಂಚನೆ: ಸರ್ಕಾರಿ ಬ್ಯಾಂಕ್‌ಗಳಿಗೆ ನಷ್ಟ

ಇಂದೋರ್‌: 2017–18ನೇ ಹಣಕಾಸು ವರ್ಷದಲ್ಲಿ ನಡೆದ ವಂಚನೆ ಪ್ರಕರಣಗಳಿಂದ ಸರ್ಕಾರಿ ಸ್ವಾಮ್ಯದ 21 ಬ್ಯಾಂಕ್‌ಗಳಿಗೆ ₹ 25,775 ಕೋಟಿಗಳಷ್ಟು ನಷ್ಟವಾಗಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಈ ಮಾಹಿತಿ ನೀಡಿದೆ. ವಂಚನೆ ಪ್ರಕರಣಗಳ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಲಾಗಿಲ್ಲ.

ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್ ಗರಿಷ್ಠ ಪ್ರಮಾಣದ (₹ 6,461 ಕೋಟಿ) ನಷ್ಟಕ್ಕೆ ಗುರಿಯಾಗಿದೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಎರಡನೇ ಸ್ಥಾನದಲ್ಲಿದೆ. ವಿಜಯ ಬ್ಯಾಂಕ್‌ ಅತಿ ಕಡಿಮೆ ವಂಚನೆಗೆ ಗುರಿಯಾಗಿದೆ.

ವಂಚನೆ ಸ್ವರೂಪ, ಮಾಹಿತಿ ಇಲ್ಲ: ಈ ಮಾಹಿತಿ ನೀಡಲು ₹ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ವಂಚನೆಗಳನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಆದರೆ, ಪ್ರಕರಣಗಳ ಸಂಖ್ಯೆ ಮತ್ತು ವಂಚನೆಯ ಸ್ವರೂಪದ ಬಗ್ಗೆ ಯಾವುದೇ ವಿವರ ಒದಗಿಸಿಲ್ಲ.

‘ವಂಚನೆ ಪ್ರಕರಣಗಳಿಂದ ಬಾಧಿತ ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿಯು ಕಳವಳಕಾರಿ ವಿದ್ಯಮಾನವಾಗಿದೆ’ ಎಂದು ಆರ್ಥಿಕತಜ್ಞ ಜಯಂತಿಲಾಲ್‌ ಭಂಡಾರಿ ಅವರು ವಿಶ್ಲೇಷಿಸಿದ್ದಾರೆ.

‘ವಂಚನೆ ಪ್ರಕರಣಗಳಿಂದ ಆರ್ಥಿಕ ನಷ್ಟಕ್ಕೆ ಗುರಿಯಾಗುವುದರ ಜತೆಗೆ, ಭವಿಷ್ಯದಲ್ಲಿ ಬ್ಯಾಂಕ್‌ಗಳು ನೀಡುವ ಹೊಸ ಸಾಲಗಳ ಮೇಲೆಯೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಆರ್ಥಿಕತೆಯ ಪಾಲಿಗೆ ಒಳ್ಳೆಯ ಬೆಳವಣಿಗೆಯಲ್ಲ’ ಎಂದೂ ಅವರು ಎಚ್ಚರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry