ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ತೆರಿಗೆ ಕಾಯ್ದೆ: ಸಲಹೆ ನೀಡುವ ಗಡುವು ವಿಸ್ತರಣೆ

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾವಣೆ ತರುವ ಸಂಬಂಧ ಸಲಹೆಗಳನ್ನು ನೀಡುವ ಗಡುವನ್ನು ಹಣಕಾಸು ಸಚಿವಾಲಯವು ಜೂನ್‌ 15ರವರೆಗೆ ವಿಸ್ತರಿಸಿದೆ.

ನೇರ ತೆರಿಗೆ ಕಾರ್ಯಪಡೆಯ ಅವಧಿಯನ್ನು ಸರ್ಕಾರವು ಹಿಂದಿನ ವಾರವಷ್ಟೇ ಮೂರು ತಿಂಗಳವರೆಗೆ (ಆಗಸ್ಟವರೆಗೆ) ವಿಸ್ತರಿಸಿದೆ. ಈ ಕಾರಣಕ್ಕೆ, ಕಾಯ್ದೆಯಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಸಲಹೆಗಳನ್ನು ನೀಡುವ ಅವಧಿಯನ್ನೂ ವಿಸ್ತರಿಸಲಾಗಿದೆ. ಕಾರ್ಯಪಡೆಯು ಮಾರ್ಚ್‌ನಲ್ಲಿ ಸಲಹೆಗಳನ್ನು ಆಹ್ವಾನಿಸಿತ್ತು. ಏಪ್ರಿಲ್‌ 2ರವರೆಗೆ ಗಡುವು ನಿಗದಿಪಡಿಸಿತ್ತು. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ ಸದಸ್ಯ ಅರವಿಂದ ಮೋದಿ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಪಡೆ ರಚಿಸಲಾಗಿದೆ.

ಕಾರ್ಯಪಡೆ ರಚನೆ: 1961ರಿಂದ ಬಳಕೆಯಲ್ಲಿ ಇರುವ ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ 2017ರ ನವೆಂಬರ್‌ನಲ್ಲಿ 6 ಮಂದಿ ಸದಸ್ಯರ ಈ ಕಾರ್ಯಪಡೆ ರಚಿಸಲಾಗಿದೆ.

ಆದಾಯ ತೆರಿಗೆ ಇಲಾಖೆಯ ಅಂತರ್ಜಾಲ ತಾಣದಲ್ಲಿ ಐ.ಟಿ ರಿಟರ್ನ್ಸ್ ಸಲ್ಲಿಕೆ, ರಿಟರ್ನ್ಸ್‌ಗಳ ಪರಿಶೀಲನೆ ಮತ್ತು ದಂಡ ವಿಧಿಸುವುದಕ್ಕೆ ಸಂಬಂಧಿಸಿದಂತೆ ತೆರಿಗೆದಾರರು ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಳ್ಳಲು ಸೂಚಿಸಲಾಗಿದೆ. ಆಸಕ್ತರು rewriting-itact@gov.in ವಿಳಾಸಕ್ಕೆ ಇ–ಮೇಲ್‌ ಮೂಲಕ ತಮ್ಮ ಸಲಹೆಗಳನ್ನು ನೀಡಬಹುದಾಗಿದೆ.

ತುಂಬ ಹಳೆಯದಾಗಿರುವ ಆದಾಯ ತೆರಿಗೆ ಕಾಯ್ದೆಗೆ ಹೊಸ ರೂಪ ನೀಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT