ನಕ್ಸಲರ ಹತ್ಯೆ

7

ನಕ್ಸಲರ ಹತ್ಯೆ

Published:
Updated:

ರಾಂಚಿ: ಜಾರ್ಖಂಡ್‌ನಲ್ಲಿ ಸೇನಾಪಡೆಗಳು ಸೋಮವಾರ ನಡೆಸಿದಎನ್‌ಕೌಂಟರ್‌ನಲ್ಲಿ ಮೂವರು ನಕ್ಸಲರು ಸಾವನ್ನಪ್ಪಿದ್ದು, ಇಬ್ಬರು ಶರಣಾಗಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಲಮು ಜಿಲ್ಲೆಯ ಚತರ್‌ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಿಆರ್‌ಪಿಎಫ್‌ ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ಮಾವೋವಾದಿಗಳ ವಿರುದ್ಧ ಎನ್‌ಕೌಂಟರ್ ನಡೆಸಿದರು ಎಂದು ಹೇಳಿದ್ದಾರೆ. ನಕ್ಸಲರ ಮೂವರು ಮೃತದೇಹಗಳ ಜೊತೆಗೆ ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿದೆ. ನಕ್ಸಲರ ವಿರುದ್ಧದ ಸೇನಾ ಕಾರ್ಯಾಚರಣೆ ಮುಂದುವರಿದಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry