‘ರೋಬೊಟ್‌ ಮನುಷ್ಯನ ಉದ್ಯೋಗ ಕಸಿಯದು’

7

‘ರೋಬೊಟ್‌ ಮನುಷ್ಯನ ಉದ್ಯೋಗ ಕಸಿಯದು’

Published:
Updated:
‘ರೋಬೊಟ್‌ ಮನುಷ್ಯನ ಉದ್ಯೋಗ ಕಸಿಯದು’

ಲಂಡನ್‌: ‘ರೋಬೊಟ್‌ಗಳು ಮನುಷ್ಯರ ಕೆಲಸವನ್ನು ಕಸಿಯುತ್ತವೆ ಎಂಬ ಭ್ರಮೆ ಬೇಡ. ಕೃತಕ ಬುದ್ಧಿಮತ್ತೆ (ಎಐ) ಭವಿಷ್ಯದ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ’ ಎಂದು ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಎಲ್ಲ ಕೆಲಸಗಳನ್ನು ರೋಬೊಟ್‌ ಮಾಡುವುದಿಲ್ಲ. ಒಂದು ವೇಳೆ ಎಲ್ಲ ಕೆಲಸಗಳನ್ನು ರೋಬೊಟ್‌ ಮಾಡುವುದಾದರೂ ವೆಚ್ಚ ಅಧಿಕವಾಗುತ್ತದೆ. ಅದು ಮನುಷ್ಯರ ಕೆಲವೊಂದು ಕೆಲಸಗಳನ್ನಷ್ಟೇ ಮಾಡುತ್ತವೆ. ಅದು ಮನುಷ್ಯರಿಗೆ ಪರ್ಯಾಯವಲ್ಲ’ ಎಂದು ‘ದಿ ಸಂಡೆ ಟೆಲಿಗ್ರಾಫ್‌’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ತಂತ್ರಜ್ಞಾನವನ್ನು ನೈತಿಕವಾಗಿ ಅಳವಡಿಸುವುದರಿಂದ ಯಾವುದೇ ಅಪಾಯ ಎದುರಾಗುವುದಿಲ್ಲ’ ಎಂದು ಸತ್ಯ ನಾದೆಲ್ಲ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry