ಮಗು ರಕ್ಷಿಸಿದವನಿಗೆ ಪೌರತ್ವ!

7

ಮಗು ರಕ್ಷಿಸಿದವನಿಗೆ ಪೌರತ್ವ!

Published:
Updated:
ಮಗು ರಕ್ಷಿಸಿದವನಿಗೆ ಪೌರತ್ವ!

ಪ್ಯಾರಿಸ್‌: ಶನಿವಾರ ರಾತ್ರಿ ಇಲ್ಲಿನ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಜಾರಿ ಕಂಬಿಯಲ್ಲಿ ನೇತಾಡುತ್ತಿದ್ದ ನಾಲ್ಕು ವರ್ಷದ ಮಗುವನ್ನು ಮಾಲಿ ದೇಶದ ನಿರಾಶ್ರಿತ ಮುಮೌಡ್‌ ಗಸ್ಸಮ್‌ ಪ್ರಾಣ ಲೆಕ್ಕಿಸದೇ ರಕ್ಷಿಸಿ ‘ಫ್ರಾನ್ಸ್‌ನ ಸ್ಪೈಡರ್‌ಮ್ಯಾನ್‌’ ಎಂದು ಖ್ಯಾತಿಗಳಿಸಿದ್ದಾರೆ.

ಯುವಕನ ಕ್ಷಿಪ್ರಗತಿಯ ಕಾರ್ಯಾಚರಣೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಯುವಕನನ್ನು ಅರಮನೆಗೆ ಕರೆಸಿಕೊಂಡ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರೋನ್‌ ಸಾಹಸಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಸ್ಸಮ್‌ಗೆ ಶೌರ್ಯಪ್ರಶಸ್ತಿ ಪ್ರಕಟಿಸಿದ್ದು, ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮತ್ತು ದೇಶದ ಪೌರತ್ವ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry