ಉಸಿರುಗಟ್ಟಿಸಿ ಮಹಿಳೆಯ ಹತ್ಯೆ

7

ಉಸಿರುಗಟ್ಟಿಸಿ ಮಹಿಳೆಯ ಹತ್ಯೆ

Published:
Updated:

ರಾಮನಗರ: ಇಲ್ಲಿನ ವಿಜಯನಗರ ಬಡಾವಣೆಯಲ್ಲಿನ ಮನೆಯೊಂದರಲ್ಲಿ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದ್ದು, ಮೂರು ದಿನಗಳ ನಂತರ ಘಟನೆಯು ಬೆಳಕಿಗೆ ಬಂದಿದೆ.

ಸರಸ್ಪತಿ (45) ಕೊಲೆಗೀಡಾದ ಮಹಿಳೆ. ಸುಮಾರು ಮೂರ್ನಾಲ್ಕು ದಿನದ ಹಿಂದೆಯೇ ಅವರನ್ನು ಹತ್ಯೆ ಮಾಡಲಾಗಿತ್ತು. ಮನೆಯ ಸಮೀಪ ದುರ್ವಾಸನೆ ಹೆಚ್ಚಾದ ಕಾರಣ ಸೋಮವಾರ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಬಾಗಿಲು ತೆರೆದು ನೋಡಿದಾಗ ಮನೆಯ ಒಳಗೆ ಟವೆಲ್‌ನಿಂದ ಕೈಕಟ್ಟಿ ಹಾಕಿದ್ದ, ಅಂಗಾತ ಮಲಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಯಿತು.

ಮೃತ ಮಹಿಳೆಯು ಪತಿಯಿಂದ ದೂರವಿದ್ದರು ಎರಡು ವರ್ಷಗಳ ಹಿಂದೆ, ಮನೆಗೆ ಬರದಂತೆ ಮಗನೊಂದಿಗೂ ಗಲಾಟೆ ಮಾಡಿದ್ದರು.

ಪರಿಚಿತರೇ ಈ ಕೃತ್ಯ ಎಸಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ರಾಮನಗರ ಟೌನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry