7

ಮಂಗಳೂರಿನಲ್ಲಿ ಮಳೆಯ ಆರ್ಭಟ: ಸಂಚಾರ ಅಸ್ತವ್ಯಸ್ತ

Published:
Updated:
ಮಂಗಳೂರಿನಲ್ಲಿ ಮಳೆಯ ಆರ್ಭಟ: ಸಂಚಾರ ಅಸ್ತವ್ಯಸ್ತ

ಮಂಗಳೂರು: ಕೇರಳಕ್ಕೆ ಮುಂಗಾರು ಪ್ರವೇಶಿಸಿದ ಬೆನ್ನಲ್ಲೆ ನಗರದಲ್ಲಿ ಮಂಗಳವಾರ ಮಳೆಯ ಆರ್ಭಟ ಶುರುವಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು, 9 ಗಂಟೆಗೆ ಶುರುವಾದ ಮಳೆ ನಿರಂತರವಾಗಿ ಸುರಿಯುತ್ತಿದೆ.

ನಗರಕ್ಕೆ ಪ್ರವೇಶ ಕಲ್ಪಿಸುವ ಪಡೀಲ್, ಪಂಪ್ ವೆಲ್ ಜಂಕ್ಷನ್ ರಸ್ತೆಗಳಲ್ಲಿ ನೀರು ನಿಂತಿದ್ದು, ಸುಮಾರು ೪೫ ನಿಮಿಷ ವಾಹನಗಳ‌ ಸಂಚಾರ ಸ್ಥಗಿತವಾಗಿತ್ತು. ಪಂಪ್ ವೆಲ್ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.

ಪಿವಿಎಸ್ ವೃತ್ತ, ಕದ್ರಿ ವೃತ್ತ, ಮಲ್ಲಿಕಟ್ಟೆ, ಸೇರಿದಂತೆ ಹಲವೆಡೆ ಮಳೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ.

ನಗರದ ‌ಸೆಂಟ್ರಲ್ ರೈಲು ನಿಲ್ದಾಣದ ಆರ್ ಎಂಎಸ್ ಕೋಣೆಗೂ ನೀರು ನುಗ್ಗಿದ್ದು ಅಂಚೆ ಪತ್ರಗಳಿಗೆ ಹಾನಿಯಾಗಿದೆ.

ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಕೂಡಲೇ ಅಧಿಕಾರಿಗಳು, ಪಾಲಿಕೆ ಸದಸ್ಯರು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿದ್ದಾರೆ.

**

ನಾಪೋಕ್ಲು: ಧಾರಾಕಾರ ಮಳೆ

ಮಡಿಕೇರಿ: ಕೊಡಗು ಜಿಲ್ಲೆಯ ನಾಪೋಕ್ಲು, ತಲಕಾವೇರಿ, ಅಯ್ಯಂಗೇರಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ.

ಉಳಿದಕಡೆ ಮೋಡ ಕವಿದ ವಾತಾವರಣವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry