ಉತ್ತಮ ಮಳೆ: ಕೆರೆ ಕಟ್ಟೆಗಳಿಗೆ ನೀರು

7

ಉತ್ತಮ ಮಳೆ: ಕೆರೆ ಕಟ್ಟೆಗಳಿಗೆ ನೀರು

Published:
Updated:
ಉತ್ತಮ ಮಳೆ: ಕೆರೆ ಕಟ್ಟೆಗಳಿಗೆ ನೀರು

ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ಭಾನುವಾರ ಸಂಜೆ  ಭಾರಿ ಮಳೆ ಸುರಿಯಿತು. ತಾಲ್ಲೂಕಿನ ಮುತ್ತೂರು ಗ್ರಾಮದ ಬಳಿಯ ಕುರುಬನಕಟ್ಟೆಯ ಏರಿ ಒಡೆದ ಪರಿಣಾಮ ಸಮೀಪದ ದೊಂಡೆಕಟ್ಟೆ ಕೆರೆಗೆ ನೀರು ಹರಿದು ಒಂದೇ ದಿನದಲ್ಲಿ ಭರ್ತಿಯಾಗಿದೆ.

ಅರಣ್ಯದಂಚಿನ ಗ್ರಾಮಗಳಾದ ಸುಳಗೋಡು, ಕೋಗಿಲವಾಡಿ, ಚೌತಿ, ಕಾಳೇತಿಮ್ಮನಹಳ್ಳಿ, ಬೇಗೂರು ಮತ್ತಿತರರ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆರೆ-ಕಟ್ಟೆಗಳಲ್ಲಿ ನೀರು ನಿಂತಿದ್ದು ರೈತರಲ್ಲಿ ಸಂತಸ ಮೂಡಿದೆ.  ಆದರೆ, ಕೆಲವು ಜಮೀನಿನಲ್ಲಿ ನೀರು ನಿಂತಿದ್ದು ಶುಂಠಿ, ಮುಸುಕಿನ ಜೋಳದ ಬೆಳೆ ಕೊಳೆಯುವ ಭೀತಿ ಎದುರಾಗಿದೆ.

‘ಮೇನಲ್ಲಿ ತಾಲ್ಲೂಕಿನಾದ್ಯಂತ ವಾಡಿಕೆಗಿಂತಲೂ ಹೆಚ್ಚಿನ ಮಳೆಯಾಗಿದ್ದು ತಂಬಾಕು ಬೆಳೆಗೆ ಅನುಕೂಲವಾಗಿದೆ. ಆದರೆ, ಹೀಗೇ ಸತತವಾಗಿ ಮಳೆ ಮುಂದುವರೆದಲ್ಲಿ ತೇವಾಂಶ ಹೆಚ್ಚಳದಿಂದ ತಂಬಾಕು ಸಸಿಗಳು ಕೊಳೆಯುವ ಅಪಾಯವಿದೆ’ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry