ಸಿಬಿಎಸ್‌ಇ ಫಲಿತಾಂಶ: ಮೊದಲ ಸ್ಥಾನ ಹಂಚಿಕೊಂಡ ನಾಲ್ವರು ಪ್ರತಿಭಾನ್ವಿತರು

7

ಸಿಬಿಎಸ್‌ಇ ಫಲಿತಾಂಶ: ಮೊದಲ ಸ್ಥಾನ ಹಂಚಿಕೊಂಡ ನಾಲ್ವರು ಪ್ರತಿಭಾನ್ವಿತರು

Published:
Updated:
ಸಿಬಿಎಸ್‌ಇ ಫಲಿತಾಂಶ: ಮೊದಲ ಸ್ಥಾನ ಹಂಚಿಕೊಂಡ ನಾಲ್ವರು ಪ್ರತಿಭಾನ್ವಿತರು

ನವದೆಹಲಿ: ಸಿಬಿಎಸ್‌ಇ ಪಠ್ಯಕ್ರಮ ಹತ್ತನೇ ತೆರಗತಿ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. 500ಕ್ಕೆ 499 ಅಂಕ ಗಳಿಸಿರುವ ನಾಲ್ಕು ವಿದ್ಯಾರ್ಥಿಗಳು ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ಗುರುಗ್ರಾಮ್‌ನ ದೆಹಲಿ ಪಬ್ಲಿಕ್‌ ಶಾಲೆಯ ಪಾರ್ಕರ್‌ ಮಿತ್ತಲ್‌, ಬಿಜನೋರ್‌ನ ಆರ್‌ಪಿ ಪಬ್ಲಿಕ್‌ ಶಾಲೆಯ ರಿಮ್‌ಜಿಮ್‌ ಅಗರ್ವಾಲ್‌, ಉತ್ತರ ಪ್ರದೇಶದ ಶಮ್ಲಿಯಲ್ಲಿರುವ ಸ್ಕಾಟಿಸ್‌ ಇಂಟರ್ನ್ಯಾಷನಲ್‌ ಶಾಲೆಯ ನಂದಿನಿ ಗರ್ಗ್‌ ಹಾಗೂ ಕೊಚ್ಚಿಯ ಭವಾನಿ ವಿದ್ಯಾಲಯದ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಜಿ. ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ತಿರುವನಂತಪುರಂ ಉತ್ತಮ ಸಾಧನೆ

ಒಟ್ಟು ಶೇ. 86.70 ವಿದ್ಯಾರ್ಥಿಗಳು ಸಿಬಿಎಸ್‌ಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಾದೇಶಿಕವಾರು ಫಲಿತಾಂಶದಲ್ಲಿ ತಿರುವನಂತಪುರಂ ಉತ್ತಮ ಸಾಧನೆ ತೋರಿದ್ದು, ಇಲ್ಲಿನ ಶೇ. 99.6 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಮುಖ್ಯಾಂಶಗಳು

ಒಟ್ಟು ಪರೀಕ್ಷಾ ಕೇಂದ್ರಗಳು: 4460

ಒಟ್ಟು ಶಾಲೆಗಳು: 17567

ಪರೀಕ್ಷೆಗೆ ಹಾಜರಾದವರು: 1624682

ಪಾಸಾದವರು: 1408594

ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry