ರಂಜಾನ್‌ ನೆಪದಲ್ಲಿ ಸಲೂನ್‌ ಸಂಭ್ರಮ

7

ರಂಜಾನ್‌ ನೆಪದಲ್ಲಿ ಸಲೂನ್‌ ಸಂಭ್ರಮ

Published:
Updated:
ರಂಜಾನ್‌ ನೆಪದಲ್ಲಿ ಸಲೂನ್‌ ಸಂಭ್ರಮ

ರಂಜಾನ್‌ ಮಾಸದ ಪವಿತ್ರ ಸಂಜೆಗಳೆಂದರೆ ಅದು ಧಾರ್ಮಿಕ ಆಚರಣೆ, ತರಹೇವಾರಿ ಭಕ್ಷ್ಯಗಳಿಗೆ ಮಾತ್ರ ಸೀಮಿತವಲ್ಲ. ಅಡಿಯಿಂದ ಮುಡಿವರೆಗೆ ಶೃಂಗರಿಸಿಕೊಂಡು ಇಫ್ತಾರ್ ಕೂಟಗಳಲ್ಲೋ, ರಂಜಾನ್ ಪಾರ್ಟಿಗಳಲ್ಲಿಯೂ ಭಾಗವಹಿಸುವವರಲ್ಲಿ ಹಬ್ಬದ ಕಳೆ ಮೇಳೈಸಿರುತ್ತದೆ. ಹೀಗೆ ಅಲಂಕರಿಸಿಕೊಳ್ಳಲು ಅನುವಾಗುವಂತೆ ವಿವಿಧ ಬ್ಯೂಟಿ ಪಾರ್ಲರ್‌, ಸಲೂನ್‌ಗಳು ಆಕರ್ಷಕ ಕೊಡುಗೆ, ರಿಯಾಯಿತಿಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸುತ್ತಿವೆ.

ಈ ವರ್ಷ ರಂಜಾನ್‌ ಮುಂಚಿತವಾಗಿ ಬೇಸಿಗೆಯಲ್ಲಿಯೇ ಬಂದಿರುವುದರಿಂದ ಕೇಶ ಮತ್ತು ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವುದು ತುಸು ತ್ರಾಸದಾಯಕ. ಸನ್‌ ಟ್ಯಾನ್‌ನಿಂದ ತ್ವಚೆ ರಕ್ಷಣೆಗೆ ಪಾರ್ಲರ್‌ ಸಲೂನ್‌ಗಳ ಮೊರೆ ಹೋಗುವುದು ಅನಿವಾರ್ಯ. ಸೂರ್ಯನ ರಶ್ಮಿಗಳಿಂದ ರಕ್ಷಣೆ ಪಡೆಯಲು ಈ ಬಾರಿ ಗೋಲ್ಡ್ ಹಾಗೂ ಸಿಲ್ವರ್‌ ಫೇಶಿಯಲ್‌ಗಳು ಹೆಚ್ಚು ಜನಪ್ರಿಯವಾಗಿವೆ.

‘ಗೋಲ್ಡ್‌ ಫೇಶಿಯಲ್‌ ಮಾಡಿಸುವುದರಿಂದ ಕನಿಷ್ಠ 15 ದಿನಗಳು ತ್ವಚೆ ಕಾಂತಿಯುತವಾಗಿರುತ್ತದೆ. ಮುಖಕ್ಕೆ ಕೂಲಿಂಗ್‌ ಮಾಸ್ಕ್‌ನೀಡುವ ‘ರೆಡಿಯೆಂಟ್‌ ಗ್ಲೋ ಫೇಶಿಯಲ್‌’ ಸಹ ಈ ಬಾರಿ ಟ್ರೆಂಡಿಯಾಗಿದೆ’ ಎನ್ನುತ್ತಾರೆ ಹೇರ್ ಅ್ಯಂಡ್‌ ಲುಕ್ಸ್‌ನ ಮ್ಯಾನೇಜರ್‌ ಕ್ಯಾಥರಿನ್‌.

ಕೇಶ ವಿನ್ಯಾಸದಲ್ಲಿ ‘ಲೇಯರ್ಸ್‌ ಲುಕ್‌’ ಮಾನಿನಿಯರ ಮನ ಗೆದ್ದಿದೆ. ಕೂದಲ ತುದಿಯಲ್ಲಿ ಮರೂನ್‌ ಹಾಗೂ ಗುಲಾಬಿ ಬಣ್ಣಗಳನ್ನು ಹಾಕುವ ಈ ಹೇರ್‌ ಸ್ಟೈಲ್‌ ಸೂರ್ಯ ರಶ್ಮಿ ತಾಕಿದಾಗ ಹೊಳೆಯುತ್ತದೆ. ಸುರುಳಿ, ಸುರುಳಿ ಎಳೆ, ಎಳೆಯಾಗಿರುವ ಈ ವಿನ್ಯಾಸ ಸದ್ಯ ಆಕರ್ಷಣೆಯ ಕೇಂದ್ರಬಿಂದು.

ಹಿಜಾಬ್‌ ಧರಿಸುವವರು ಕೇಶ ವಿನ್ಯಾಸಕ್ಕಿಂತ ಹೆಚ್ಚಾಗಿ ಕೈ, ಹಾಗೂ ಕಾಲುಗಳ ಸೌಂದರ್ಯ ವರ್ಧಕಗಳಿಗೆ ಆದ್ಯತೆ ನೀಡುತ್ತಾರೆ. ಡೀಟೈನ್‌ ಹಾಗೂ ಟ್ಯಾನ್‌ ರಿಮೋವಲ್‌ ಪೆಡಿಕ್ಯೂರ್ ಹಾಗೂ ಮೆನಿಕ್ಯೂರ್‌ಗಳ ಮೊರೆ ಹೋಗುತ್ತಾರೆ.

ಹೇರ್ ಅ್ಯಂಡ್‌ ಲುಕ್ಸ್‌: ಹೇರ್‌ ಅ್ಯಂಡ್‌ ಲುಕ್ಸ್‌ ಈ ಬಾರಿಯ ರಂಜಾನ್‌ ಪ್ರಯುಕ್ತ ರಿಯಾಯಿತಿ ದರದಲ್ಲಿ ಕೆಲ ಪ್ಯಾಕೇಜ್‌ಗಳನ್ನು ನೀಡಿದೆ. ₹ 999ಕ್ಕೆ ಹೇರ್‌ ಕಟ್‌, ಇಂಟೆನ್ಸ್‌ ಗ್ಲಾಸ್‌ ಫೇಶಿಯಲ್‌, ಹಾಗೂ ಪೆಡಿಕೇರ್‌ ಪ್ಯಾಕೇಜ್‌ ನೀಡಿದೆ. ₹1,499ಕ್ಕೆ ಹೇರ್‌ ಕಟ್‌, ರೇಡಿಯಂಟ್‌ ಗ್ಲೋ ಫೇಶಿಯಲ್‌, ವ್ಯಾಕ್ಸಿನ್‌, ಪೆಡಿಕ್ಯೂರ್ ಪ್ಯಾಕೇಜ್‌ ನೀಡಿದೆ. ₹ 2,500ಕ್ಕೆ ವಿಶೇಷ ಫೇಶಿಯಲ್‌, ಹೇರ್‌ಕಟ್‌, ಪೆಡಿಕ್ಯೂರ್, ಮೆನಿಕ್ಯೂರ್‌, ವ್ಯಾಕ್ಸಿಂಗ್‌ ಪ್ಯಾಕೇಜ್‌ ನೀಡಿದೆ. ಜೀವನ್‌ಭಿಮಾನಗರದಲ್ಲಿ ಹೇರ್ ಅ್ಯಂಡ್‌ ಲುಕ್ಸ್‌ ಸಲೂನ್‌ನಲ್ಲಿ ರಂಜಾನ್‌ ಕೊನೆಯವರೆಗೆ ಈ ರಿಯಾಯಿತಿ ಪ್ಯಾಕೇಜ್‌ಗಳು ಇರಲಿವೆ. ಸಂಪರ್ಕ:9741101993

ದಿವಾ ಯೂನಿಸೆಕ್ಸ್ ಸಲೂನ್‌: (Diva Unisex Salon): ನ್ಯೂ ಬೆಲ್‌ ರಸ್ತೆಯಲ್ಲಿರುವ ದಿವಾ ಸಲೂನ್‌ ರಂಜಾನ್‌ ಕೊಡುಗೆ ನೀಡಿದೆ. ಸಲೂನ್‌ನಲ್ಲಿನ ಎಲ್ಲ ಕೇಶ ಹಾಗೂ ಚರ್ಮಗಳಿಗೆ ಸಂಬಂಧಿತ ಸೇವೆಗಳ ಮೇಲೆ ಶೇ 15 ರಷ್ಟು ರಿಯಾಯಿತಿ ನೀಡಿದೆ. ಆದರೆ ಕೆಲವು ಸೇವೆ ಹಾಗೂ ಉತ್ಪನ್ನಗಳ ಮೇಲೆ ಕಂಪೆನಿಯ ಕಂಡೀಷನ್‌ ಅನ್ವಯವಾಗಲಿದೆ. ಜೂನ್‌ 30ರವರೆಗೆ ಈ ರಿಯಾಯಿತಿ ಇರಲಿದೆ. ಸಂಪರ್ಕ:08041687444/666

ನ್ಯಾಚುರಲ್ಸ್‌ ಪಾರ್ಲರ್‌: ರಿಚ್ಮಂಡ್‌ ಟೌನ್‌ನಲ್ಲಿನ ನ್ಯಾಚುರಲ್ಸ್‌ ಪಾರ್ಲರ್‌ ಹೇರ್‌ ಸ್ಮೂತ್‌ನಿಂಗ್‌ಗೆ ₹ 4,999ರ ಪ್ಯಾಕೇಜ್‌ ನೀಡಿದೆ. ಅಲ್ಲದೆ, ರಂಜಾನ್‌ ಮುಗಿಯುವವರೆಗೆ ಸಲೂನ್‌ನಲ್ಲಿನ ಎಲ್ಲ ಸೇವೆಗಳ ಮೇಲೆ ಶೇ 30 ರಷ್ಟು ರಿಯಾಯಿತಿ ನೀಡಿದೆ. ₹1999ಕ್ಕೆ ‘ಹೆಡ್‌ ಟು ಟೊ’ (ಅಡಿಯಿಂದ ಮುಡಿ) ಎಂಬ ಪ್ಯಾಕೇಜ್‌ ನೀಡಿದೆ.

ಗ್ರೀನ್ ಟ್ರೆಂಡ್‌: ಗ್ರೀನ್‌ ಟ್ರೆಂಡ್ ಪಾರ್ಲರ್‌ ರಂಜಾನ್‌ ಪ್ರಯುಕ್ತ ‘ಆ್ಯಕ್ಟೀವ್‌ ಚಾರ್ಕೋಲ್‌ ಪೇಶಿಯಲ್‌’ ಪ್ಯಾಕೇಜ್ ಪರಿಚಯಿಸಿದೆ. ಬೇಸಿಗೆಯಲ್ಲಿನ ಅತಿನೇರಳಾತೀತ ಕಿರಣಗಳಿಂದ ತ್ವಚೆಯನ್ನು ಇದು ರಕ್ಷಿಸುತ್ತದೆ. ತ್ವಚೆಗೆ ತಾಜಾತನದ ಅನುಭವ ನೀಡುತ್ತದೆ. ಬೇಸಿಗೆಯ ವಿಶೇಷ ಪ್ಯಾಕೇಜ್ ಇದಾಗಿದ್ದು, ಬೆಲೆ

₹ 2,000 ದಿಂದ 2,400. ಸಂಪರ್ಕ:18004202020

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry