ಎಂಬಸಿ: ಸ್ಮಾರ್ಟ್‌ಗೃಹ ಯೋಜನೆ

5

ಎಂಬಸಿ: ಸ್ಮಾರ್ಟ್‌ಗೃಹ ಯೋಜನೆ

Published:
Updated:
ಎಂಬಸಿ: ಸ್ಮಾರ್ಟ್‌ಗೃಹ ಯೋಜನೆ

ಬೆಂಗಳೂರು: ಬೆಂಗಳೂರಿನ ಕಟ್ಟಡ ನಿರ್ಮಾಣ ಸಂಸ್ಥೆ ಎಂಬಸಿ ಗ್ರೂಪ್, ಸ್ಮಾರ್ಟ್‌ ಜೀವನಶೈಲಿಯ ‘ಎಂಬಸಿ ಎಡ್ಜ್‌’ ಹೆಸರಿನ ಹೊಸ ಯೋಜನೆ ಆರಂಭಿಸಿದೆ.

ಇದು ನಗರದಲ್ಲೇ ಅತಿ ದೊಡ್ಡ ವಸತಿ ಸಮುಚ್ಛಯವಾಗಿದೆ. ಅಮೆಜಾನ್ ಅಲೆಕ್ಸಾ ಸಹಯೋಗದಲ್ಲಿ ಸಂಸ್ಥೆಯು, ಈ ಯೋಜನೆ ಮನೆಗಳಿಗೆ ಸ್ಮಾರ್ಟ್ ತಂತ್ರಜ್ಞಾನ ಒದಗಿಸಲಿದೆ.

ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಬಸಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಜಿತು ವಿರ್ವಾನಿ, ‘ಐಷಾರಾಮಿ ಗೃಹಗಳನ್ನು ನಿರ್ಮಿಸಿ ಯಶಸ್ಸು ಗಳಿಸಿದ್ದೇವೆ. ಗುಣಮಟ್ಟದ ಗೃಹಗಳನ್ನು ನಿರ್ಮಿಸುವುದು ನಮ್ಮ ಗುರಿ. ಈಗ ಎಂಬಸಿ ಎಡ್ಜ್‌   ಯೋಜನೆ ಆರಂಭಿಸಿದ್ದೇವೆ’ ಎಂದರು.

‘ಈ ಯೋಜನೆಯಡಿಯಲ್ಲಿ ನಿರ್ಮಿಸಲಾಗುವ ಗೃಹಗಳು, ಸ್ಮಾರ್ಟ್‌ ತಂತ್ರಜ್ಞಾನವನ್ನು ಒಳಗೊಂಡಿವೆ. ಅಮೆಜಾನ್‌ ಅಲೆಕ್ಸಾ ಉಪಕರಣಗಳನ್ನು ಅಳವಡಿಸಲಾಗುವುದು’ ಎಂದರು.

1 ಬಿಎಚ್‌ಕೆ, 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆ ಮಾದರಿಗಳಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ವಿಸ್ತೀರ್ಣ 607ರಿಂದ 1,406 ಚ.ಅಡಿ ಇದೆ. ದರ ₹ 36 ಲಕ್ಷದಿಂದ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry