ಪೇಟಿಎಂ ಮೂಲಕ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ

7

ಪೇಟಿಎಂ ಮೂಲಕ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ

Published:
Updated:
ಪೇಟಿಎಂ ಮೂಲಕ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ

ಬೆಂಗಳೂರು: ಮೊಬೈಲ್‌ ವಾಲೆಟ್‌ ಪೇಟಿಎಂ ಒಡೆತನದ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್, ತನ್ನ ಗ್ರಾಹಕರಿಗೆ ಹೊಸ ಕೊಡುಗೆಯೊಂದನ್ನು ಘೋಷಿಸಿದ್ದು, ಪೇಟಿಎಂ ಆ್ಯಪ್ ಮೂಲಕ ಬ್ಯಾಂಕಿಗೆ ಹಣ ವರ್ಗಾವಣೆ ಮಾಡಿದರೆ ಪ್ರತಿಬಾರಿ ₹ 100  ವರೆಗೆ ಪೇಟಿಎಂನಲ್ಲಿ ಹಣ ಪಡೆಯಬಹುದು.

ಪೇಟಿಎಂ ಬ್ಯಾಂಕ್ ಟ್ರಾನ್ಸಫರ್ ಮೂಲಕ ಗ್ರಾಹಕರು ಸುಲಭವಾಗಿ ಮತ್ತು ತಕ್ಷಣಕ್ಕೆ ಹಣ ವರ್ಗಾವಣೆ ಮಾಡಬಹುದು. ಯಾವುದೇ ಬ್ಯಾಂಕ್ ಶಾಖೆಯಿಂದ ಇತರೆ ಯಾವುದೇ ಬ್ಯಾಂಕ್ ಶಾಖೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ ಗ್ರಾಹಕರು ಹಣವನ್ನು ಪೇಟಿಎಂ ವ್ಯಾಲೆಟ್‍ಗೆ ಕಳುಹಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಈ ವರ್ಗಾವಣೆ ಪ್ರಕ್ರಿಯೆಗೆ ಯಾವುದೇ ಶುಲ್ಕವೂ ಇರುವುದಿಲ್ಲ. ಪೇಟಿಎಂ ಆ್ಯಪ್ ಮೂಲಕ ಹಣ ವರ್ಗಾವಣೆಗೆ ‘ಕೆವೈಸಿ’ಯ ಅಗತ್ಯವೂ ಇರುವುದಿಲ್ಲ.

₹100 ಗಳಿಕೆ ಹೇಗೆ: ಪೇಟಿಎಂ ಆ್ಯಪ್‌ನಲ್ಲಿ ಇರುವ 'ಬ್ಯಾಂಕ್ ಟ್ರಾನ್ಸಫರ್' ಕ್ಲಿಕ್ ಮಾಡಿ  ಬ್ಯಾಂಕ್ ಆಯ್ಕೆಮಾಡಿ. ತಕ್ಷಣವೇ ಅದು ಆ್ಯಪ್‍ಗೆ ಸಂಪರ್ಕಗೊಳ್ಳುತ್ತದೆ. ಆಗ ಖಾತೆಗೆ ₹ 10 ಸಂದಾಯವಾಗುತ್ತದೆ.

'ಬ್ಯಾಂಕ್ ಟ್ರಾನ್ಸಫರ್'ನಲ್ಲಿ ಹಣ ಕಳುಹಿಸಬೇಕಾದವರ ಖಾತೆ ಸಂಖ್ಯೆ ಅಥವಾ ಯುಪಿಐ ಐಡಿಗೆ ಹಣವನ್ನು ವರ್ಗಾವಣೆ ಮಾಡಿ. ತಕ್ಷಣವೇ ಪೇಟಿಎಂ ಖಾತೆಗೆ ₹ 50 ಸಂದಾಯವಾಗುತ್ತದೆ.

ಆ್ಯಪ್‍ನಲ್ಲಿ 'ಪೇಟಿಎಂ ಭೀಮ್ ಯುಪಿಐ' ಬಳಸಿಕೊಂಡು ಮೊಬೈಲ್ ರೀಚಾರ್ಜ್ ಅಥವಾ ಯಾವುದೇ ಬಿಲ್‍ಗಳನ್ನು ಪಾವತಿ ಮಾಡಿದರೆ ಖಾತೆಗೆ ₹ 30 ಜಮೆ ಆಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry