‘ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಫ್ರಾನ್ಸ್‌’

4

‘ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಫ್ರಾನ್ಸ್‌’

Published:
Updated:
‘ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡ ಫ್ರಾನ್ಸ್‌’

ಪ್ಯಾರಿಸ್‌: ‘ಅಭ್ಯಾಸ ಪಂದ್ಯದಲ್ಲಿ ನಮ್ಮ ತಂಡದ ವಿರುದ್ಧ ಉತ್ತಮ ಸಾಮರ್ಥ್ಯ ತೋರಿದ ಫ್ರಾನ್ಸ್‌ ತಂಡವು ಈ ಬಾರಿ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು’ ಎಂದು ರಿಪಬ್ಲಿಕ್‌ ಆಫ್‌ ಐರ್ಲೆಂಡ್‌ ತಂಡದ ಕೋಚ್‌ ಮಾರ್ಟಿನ್‌ ಓನಿಲ್‌ ಹೇಳಿದ್ದಾರೆ.

ಸೋಮವಾರ ನಡೆದ ಈ ಪಂದ್ಯದಲ್ಲಿ ಫ್ರಾನ್ಸ್ ತಂಡವು ರಿಪಬ್ಲಿಕ್‌ ಆಫ್‌ ಐರ್ಲೆಂಡ್‌ ವಿರುದ್ಧ 2–0 ಗೊಲುಗಳಿಂದ ಜಯಿಸಿತ್ತು. ಫ್ರಾನ್ಸ್‌ನ ಒಲಿವಿಯರ್‌ ಗಿರೌಡ್‌ ಹಾಗೂ ನಬಿಲ್‌ ಫಕೀರ್‌ ತಲಾ ಒಂದು ಗೋಲು ದಾಖಲಿಸಿದ್ದರು.

‘ಫ್ರಾನ್ಸ್‌ ಈಗ ಬಲಿಷ್ಠ ತಂಡ. ಅದು ಅನೇಕ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದೆ. ಕಳೆದ ಎರಡು ವರ್ಷಗಳಲ್ಲಿ ಆ ತಂಡವು ಅನೇಕ ಸ್ತರಗಳಲ್ಲಿ ವೃದ್ಧಿಯಾಗಿದೆ. ಪ್ರಮುಖ ತಂಡಗಳ ಸವಾಲು ಮೀರುವ ಸಾಮರ್ಥ್ಯ ಬೆಳೆಸಿಕೊಂಡಿದೆ’ ಎಂದು ಮಾರ್ಟಿನ್‌ ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮ ತಂಡದ ವಿರುದ್ದ ಫ್ರಾನ್ಸ್‌ ಸಂಘಟಿತ ಹೋರಾಟ ನಡೆಸಿತು. ಆ ಪಂದ್ಯದಲ್ಲಿ ನಮ್ಮ ಲೆಕ್ಕಾಚಾರಗಳೆಲ್ಲ ತಲೆಕೆಳಗಾದವು’ ಎಂದು ಅವರು ತಿಳಿಸಿದ್ದಾರೆ. 

‘ಸಿ’ ಗುಂಪಿನಲ್ಲಿರುವ ಫ್ರಾನ್ಸ್‌ ತಂಡವು ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ನಂತರ ಪೆರು ಹಾಗೂ ಡೆನ್ಮಾರ್ಕ್‌ ತಂಡಗಳ ವಿರುದ್ಧ ಸೆಣಸಲಿದೆ.

ಈ ಬಾರಿಯ ಫಿಫಾ ವಿಶ್ವಕಪ್‌ ಜೂನ್‌ 14ರಂದು ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry