7

ಸಂಸದ ಕರಡಿ ಸೇರಿ 38 ಜನರ ವಿರುದ್ಧ ಪ್ರಕರಣ ದಾಖಲು

Published:
Updated:

ಕೊಪ್ಪಳ: ನಗರ ಪೊಲೀಸ್‌ ಠಾಣೆಗೆ ನುಗ್ಗಿ ದಾಂದಲೆ ನಡೆಸಿದ ಸಂಬಂಧ ಸಂಸದ ಸಂಗಣ್ಣ ಕರಡಿ ಸೇರಿ 38 ಜನರ ವಿರುದ್ಧ ಮಂಗಳವಾರ ದೂರು ದಾಖಲಾಗಿದೆ.

ಸರ್ಕಾರಿ ಕೆಲಸಕ್ಕೆ ಅಡ್ಡಿ, ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ದೂರನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ.

ಸೋಮವಾರ ಬಂದ್‌ ವೇಳೆ ಸಂಗಣ್ಣ ಕರಡಿ, ಬಿಜೆಪಿ ಕಾರ್ಯಕರ್ತರು ಹಾಗೂ ಡಿವೈಎಸ್ಪಿ ಎಸ್.ಎಂ.ಸಂದಿಗವಾಡ ಹಾಗೂ ಸಿಪಿಐ ರವಿ ಉಕ್ಕುಂದ ಅವರ ನಡುವೆ ತಳ್ಳಾಟ, ವಾಗ್ವಾದ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry