ಅಫ್ಗಾನಿಸ್ತಾನ ತಂಡಕ್ಕೆ ಸ್ಪಿನ್ನರ್‌ಗಳ ಬಲ

5

ಅಫ್ಗಾನಿಸ್ತಾನ ತಂಡಕ್ಕೆ ಸ್ಪಿನ್ನರ್‌ಗಳ ಬಲ

Published:
Updated:
ಅಫ್ಗಾನಿಸ್ತಾನ ತಂಡಕ್ಕೆ ಸ್ಪಿನ್ನರ್‌ಗಳ ಬಲ

ನವದೆಹಲಿ: ಭಾರತ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯಕ್ಕಾಗಿ ಅಫ್ಗಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು, ಉದಯೋನ್ಮುಖ ಸ್ಪಿನ್‌ ಬೌಲರ್‌ಗಳಾದ ರಶೀದ್‌

ಖಾನ್‌ ಹಾಗೂ ಮುಜೀಬ್‌ ಉರ್‌ ರಹಮಾನ್‌ ಅವರು ಸ್ಥಾನ ಗಳಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಅದ್ಭುತ ಸಾಮರ್ಥ್ಯ ತೋರಿದ್ದ ಈ ಇಬ್ಬರ ಜೊತೆ ಚೈನಾಮನ್‌ ಶೈಲಿಯ ಸ್ಪಿನ್ನರ್‌ ಜಹೀರ್‌ ಖಾನ್‌ ಹಾಗೂ ಎಡಗೈ ಸ್ಪಿನ್ನರ್‌ ಅಮೀರ್‌ ಹಮ್ಜಾ ಅವರಿಗೂ ಸ್ಥಾನ ಲಭಿಸಿದೆ.

ಗಾಯದ ಕಾರಣದಿಂದ ದೌಲತ್‌ ಜದ್ರಾನ್‌ ಅವರು ತಂಡದಿಂದ ಹೊರಗುಳಿದಿದ್ದಾರೆ. ವೇಗದ ಬೌಲರ್‌ಗಳಾದ ಯಾಮಿನ್‌ ಅಹ್ಮದ್‌ಜಾಯಿ ವಫಾದರ್‌ ಹಾಗೂ ಸೈಯದ್‌ ಅಹ್ಮದ್‌ ಶಿರ್ಜಾದ್‌ ತಂಡದಲ್ಲಿದ್ದಾರೆ.

ತಂಡವನ್ನು ಅಸ್ಗರ್‌ ಸ್ಟಾನಿಕ್‌ಜಾಯ್‌ ಅವರು ಮುನ್ನಡೆಸಲಿದ್ದಾರೆ. ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಶಹಜಾದ್‌ ಹಾಗೂ ಆಲ್‌ರೌಂಡರ್‌ ಮೊಹಮ್ಮದ್‌ ನಬಿ ಅವರು ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ.

ಇಡೀ ತಂಡದಲ್ಲಿ ಮೊಹಮ್ಮದ್‌ ನಬಿ, ನಾಯಕ ಸ್ಟಾನಿಕ್‌ಜಾಯ್‌ ಸೇರಿದಂತೆ ಕೇವಲ ನಾಲ್ಕು ಆಟಗಾರರು ಮಾತ್ರ 20ಕ್ಕೂ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ತಂಡ ಇಂತಿದೆ: ಅಸ್ಗರ್‌ ಸ್ಟಾನಿಕ್‌ಜಾಯ್‌ (ನಾಯಕ), ಮೊಹಮ್ಮದ್‌ ಶಹಜಾದ್‌, ಜಾವೇದ್‌ ಅಹ್ಮದಿ, ರಹಮತ್‌ ಶಾ, ಇಹಶಾನುಲ್ಲಾ ಜನ್ನತ್, ನಾಸೀರ್‌ ಜಮಾಲ್‌, ಹಶ್ಮತುಲ್ಲಾ ಶಹಿದಿ, ಅಫ್ಸರ್‌ ಜಜೈ, ಮೊಹಮ್ಮದ್‌ ನಬಿ, ರಶೀದ್‌ ಖಾನ್‌, ಜಹೀರ್‌ ಖಾನ್‌, ಅಮೀರ್‌ ಹಮ್ಜಾ ಹೋತಕ್‌, ಸೈಯದ್‌ ಅಹ್ಮದ್‌ ಶಿರ್ಜಾದ್‌, ಯಾಮಿನ್‌ ಅಹ್ಮದ್‌ಜೈ ವಫಾದರ್‌, ಮುಜೀಬ್‌ ಉರ್‌ ರಹಮಾನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry