7

ಅಭ್ಯಾಸ ಪಂದ್ಯದಲ್ಲಿ ಇಟಲಿಗೆ ಜಯ

Published:
Updated:
ಅಭ್ಯಾಸ ಪಂದ್ಯದಲ್ಲಿ ಇಟಲಿಗೆ ಜಯ

ಸೇಂಟ್‌ ಗ್ಯಾಲನ್‌, ಸ್ವಿಟ್ಜರ್‌ಲೆಂಡ್‌: ಇಟಲಿ ತಂಡದವರು ಫಿಫಾ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಗೆದ್ದಿದ್ದಾರೆ. ಮಂಗಳವಾರ ನಡೆದ ಹೋರಾಟದಲ್ಲಿ ಇಟಲಿ 2–1 ಗೋಲುಗಳಿಂದ ಸೌದಿ ಅರೇಬಿಯಾ ತಂಡವನ್ನು ಸೋಲಿಸಿತು.

ಮುಂಚೂಣಿ ವಿಭಾಗದ ಆಟಗಾರ ಮರಿಯೊ ಬಲೊಟೆಲಿ 21ನೇ ನಿಮಿಷದಲ್ಲಿ ಇಟಲಿ ತಂಡದ ಖಾತೆ ತೆರೆದರು. 69ನೇ ನಿಮಿಷದಲ್ಲಿ ಬೆಲೋಟ್ಟಿ ಗೋಲು ದಾಖಲಿಸಿ ತಂಡದ ಮುನ್ನಡೆಗೆ ಕಾರಣರಾದರು.

72ನೇ ನಿಮಿಷದಲ್ಲಿ ಸೌದಿ ತಂಡದ ಅಲ್‌ ಶೆರ್‌ಹಿರಿ ಚೆಂಡನ್ನು ಗುರಿ ತಲುಪಿಸಿ ಹಿನ್ನಡೆ ತಗ್ಗಿಸಿದರು.

ಪೋರ್ಚುಗಲ್‌ನ ಬ್ರಾಗಾದಲ್ಲಿ ನಡೆದ ಪೋರ್ಚುಗಲ್‌ ಮತ್ತು ಟ್ಯುನೀಷಿಯಾ ನಡುವಣ ಪಂದ್ಯ 2–2 ಗೋಲುಗಳಿಂದ ಡ್ರಾ ಆಯಿತು.

ಪೋರ್ಚುಗಲ್‌ ಪರ ಸಿಲ್ವಾ ಮತ್ತು ಮರಿಯೊ ಕ್ರಮವಾಗಿ 22 ಮತ್ತು 34ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು.

ಟ್ಯುನೀಷಿಯಾ ತಂಡದ ಬದ್ರಿ (39ನೇ ನಿಮಿಷ) ಮತ್ತು ಯೂಸುಫ್‌ (64ನೇ ನಿ.) ಗೋಲು ದಾಖಲಿಸಿ ಮಿಂಚಿದರು. ಪೋರ್ಚುಗಲ್‌ ತಂಡದ ಪ್ರಮುಖ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ.

ಪ್ಯಾರಿಸ್‌ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಫ್ರಾನ್ಸ್‌ 2–0 ಗೋಲುಗಳಿಂದ ರಿಪಬ್ಲಿಕ್‌ ಆಫ್‌ ಐರ್ಲೆಂಡ್‌ ತಂಡವನ್ನು ಸೋಲಿಸಿತು.

ಫ್ರಾನ್ಸ್‌ ತಂಡದ ಗಿರೌಡ್‌ ಮತ್ತು ಫೆಕಿರ್‌ ಅವರು ಕ್ರಮವಾಗಿ 40 ಮತ್ತು 43ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ಕ್ಯಾಲಿಫೋರ್ನಿಯಾದಲ್ಲಿ ನಡೆದ ಮೆಕ್ಸಿಕೊ ಮತ್ತು ವೇಲ್ಸ್‌ ನಡುವಣ ಪಂದ್ಯ ಗೋಲು ರಹಿತ ಡ್ರಾದಲ್ಲಿ ಅಂತ್ಯವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry