ಬಸ್ ಪಲ್ಟಿ- 18 ಮಂದಿಗೆ ಗಾಯ

7
ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಬಸ್‌

ಬಸ್ ಪಲ್ಟಿ- 18 ಮಂದಿಗೆ ಗಾಯ

Published:
Updated:
ಬಸ್ ಪಲ್ಟಿ- 18 ಮಂದಿಗೆ ಗಾಯ

ಕಡೂರು (ಚಿಕ್ಕಮಗಳೂರು): ಇಲ್ಲಿಗೆ ಸಮೀಪದ ತಂಗಲಿಯಲ್ಲಿ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್ ಸೇತುವೆಯಿಂದ ಕೆಳಗುರುಳಿ 18 ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್, ತಂಗಲಿ ವೇದಾನದಿ ಸೇತುವೆಯ ಮಧ್ಯಭಾಗಕ್ಕೆ ಬಂದಾಗ ಸ್ಟೇರಿಂಗ್ ರಾಡ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ಸೇತುವೆಯ ಬಲಭಾಗಕ್ಕೆ ಪಲ್ಟಿಯಾಗಿ ಸುಮಾರು 30 ಅಡಿ ಆಳಕ್ಕೆ ಉರುಳಿತು.

ಅದರಲ್ಲಿ 28 ಪ್ರಯಾಣಿಕರಿದ್ದರು. ಗಂಭೀರವಾಗಿ ಗಾಯಗೊಮಡ ಇಬ್ಬರನ್ನು ಶಿವಮೊಗ್ಗಕ್ಕೆ ಸಾಗಿಸಲಾಗಿದ್ದರೆ, ಉಳಿದವರು ಕಡೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

* ಸೇತುವೆ ಮಧ್ಯಕ್ಕೆ ಬಂದಾಗ ದೊಡ್ಡ ಶಬ್ದ ಬಂತು. ಕೂಡಲೇ ಸ್ಟೇರಿಂಗ್ ಫ್ರೀ ಆಗಿ ಬಸ್ ನಿಯಂತ್ರಣ ತಪ್ಪಿ ಕಣ್ಣು ಮುಚ್ಚಿ ಬಿಡುವುದರೊಳಗೆ ಸೇತುವೆಯಿಂದ ಪಲ್ಟಿಯಾಯಿತು.

-ಗೋವಿಂದು, ಬಸ್ ಚಾಲಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry