ಬಾಲಕಿಯರೇ ಮೇಲುಗೈ ನಾಲ್ವರಿಗೆ ಮೊದಲ ಸ್ಥಾನ

7

ಬಾಲಕಿಯರೇ ಮೇಲುಗೈ ನಾಲ್ವರಿಗೆ ಮೊದಲ ಸ್ಥಾನ

Published:
Updated:
ಬಾಲಕಿಯರೇ ಮೇಲುಗೈ ನಾಲ್ವರಿಗೆ ಮೊದಲ ಸ್ಥಾನ

ನವದೆಹಲಿ: ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ನಾಲ್ವರು ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆದಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಒಟ್ಟಾರೆ ಶೇಕಡ 86.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರಲ್ಲಿ ಶೇಕಡ 88.67 ಮತ್ತು ಬಾಲಕರಲ್ಲಿ ಶೇಕಡ 85.32ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ನಾಲ್ಕು ವಿದ್ಯಾರ್ಥಿಗಳು 500ಕ್ಕೆ 499, ಏಳು ವಿದ್ಯಾರ್ಥಿಗಳು 500ಕ್ಕೆ 498 ಹಾಗೂ 14 ವಿದ್ಯಾರ್ಥಿಗಳು 497 ಅಂಕಗಳನ್ನು ಪಡೆದಿದ್ದಾರೆ. 1,31,493 ವಿದ್ಯಾರ್ಥಿಗಳು ಶೇಕಡ 90 ಮತ್ತು ಅದಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.

27,426 ವಿದ್ಯಾರ್ಥಿಗಳು ಶೇಕಡ 95 ಅಂಕಗಳನ್ನು ಪಡೆದಿದ್ದಾರೆ.

ಅಂಗವಿಕಲರ ಸಾಧನೆ: ಅಂಗವಿಕಲ ವಿದ್ಯಾರ್ಥಿಗಳಲ್ಲಿ ಶೇಕಡ 92.55 ಉತ್ತೀರ್ಣರಾ ಗಿದ್ದು, ಗುರುಗ್ರಾಮದ ಸನ್‌ಸಿಟಿಯ ಅನುಷ್ಕಾ ಪಂಡಾ ಮತ್ತು ಗಾಜಿಯಾಬಾ ದ್‌ನ ಉತ್ತಮ ಶಾಲೆಯ ಸನ್ಯಾ ಗಾಂಧಿ ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಈ ಇಬ್ಬರೂ 489 ಅಂಕಗಳನ್ನು ಪಡೆದಿದ್ದಾರೆ.

ಒಡಿಶಾದ ಧನ್ಪುರ್‌ ಜವಾಹರ ನವೋದಯ ವಿದ್ಯಾಲಯದ ಸೌಮ್ಯ ದೀಪಾ ಪ್ರಧಾನ್‌ 484 ಅಂಕಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ. 135 ವಿದ್ಯಾರ್ಥಿಗಳು ಶೇಕಡ 90 ಮತ್ತು ಅದಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 21 ವಿದ್ಯಾರ್ಥಿಗಳು ಶೇಕಡ 95, ಅದಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ.

ನವೋದಯ ಶಾಲೆಗಳ ಅತ್ಯುತ್ತಮ ಸಾಧನೆ

ಸಿಬಿಎಸ್‌ಇಯಿಂದ ಮಾನ್ಯತೆ ಪಡೆದಿರುವ ವಿವಿಧ ಶಾಲೆಗಳಲ್ಲಿ ಜವಾಹರ ನವೋದಯ ವಿದ್ಯಾಲಯದ (ಜೆಎನ್‌ವಿ) ವಿದ್ಯಾರ್ಥಿಗಳು (ಶೇಕಡ 97.31) ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿ ದಾಖಲೆ ಸ್ಥಾಪಿಸಿದ್ದಾರೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಪಾಸಾಗಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ: ವಿದ್ಯಾರ್ಥಿಗಳ ಪಟ್ಟಿ ಸಿಬಿಎಸ್‌ಇಗೆ

ಸಿಬಿಎಸ್‌ಇ 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳ ಸೋರಿಕೆಯಾಗಿದ್ದ ‍ಪ್ರಶ್ನೆಪತ್ರಿಕೆಗಳನ್ನು ಪಡೆದಿದ್ದಾರೆ ಎನ್ನಲಾದ ವಿದ್ಯಾರ್ಥಿಗಳ ಪಟ್ಟಿಯನ್ನು ದೆಹಲಿ ಪೊಲೀಸರು ಸಿಬಿಎಸ್‌ಇಗೆ ಕಳುಹಿಸಿದ್ದಾರೆ.

ಸಿಬಿಎಸ್‌ಇ ಕೋರಿಕೆಯಂತೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖಾ ವರದಿ ಜತೆಗೆ ಸುಮಾರು 60 ವಿದ್ಯಾರ್ಥಿಗಳ ಪಟ್ಟಿಯನ್ನು ಕಳುಹಿಸಲಾಗಿದೆ.

ದೆಹಲಿಯ ಬವಾನಾದ ಖಜಾನಿ ಕಾನ್ವೆಂಟ್‌ ಶಾಲೆಯ ಪ್ರಾಂಶುಪಾಲರು ತನಿಖೆಗೆ ಸಹಕರಿಸುತ್ತಿಲ್ಲ ಎನ್ನುವ ಅಂಶವನ್ನು ಸಹ ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ವಲಯವಾರು

* ತಿರುವನಂತಪುರ 99.60

* ಚೆನ್ನೈ 97.37

* ಅಜ್ಮಿರ್‌ 91.86

* ದೆಹಲಿ 78.61

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry