ಬುಧವಾರ, ಡಿಸೆಂಬರ್ 11, 2019
20 °C

ಹಿರಿಯ ಕ್ರೀಡಾ ಪತ್ರಕರ್ತ ಸತೀಶ್ ಪಾಲ್ ನಿಧನ

Published:
Updated:
ಹಿರಿಯ ಕ್ರೀಡಾ ಪತ್ರಕರ್ತ ಸತೀಶ್ ಪಾಲ್ ನಿಧನ

ಬೆಂಗಳೂರು: ಹಿರಿಯ ಕ್ರೀಡಾ ಪತ್ರಕರ್ತ ಸತೀಶ್ ಪಾಲ್ (52) ಮಂಗಳವಾರ ನಿಧನರಾದರು.

ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ತಾಯಿ, ಪತ್ನಿ, ಇಬ್ಬರು ಮಕ್ಕಳು, ಒಬ್ಬ ಸಹೋದರ ಮತ್ತು ಸಹೋದರಿ ಇದ್ದಾರೆ.

ಸತೀಶ್ ಅವರು ಸುಮಾರು 27 ವರ್ಷಗಳ ಕಾಲ ರಾಷ್ಟ್ರದ ಪ್ರಮುಖ ಇಂಗ್ಲಿಷ್‌ ಪತ್ರಿಕೆಗಳಲ್ಲಿ ಕ್ರೀಡಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಮೃತರ ಅಂತ್ಯ ಕ್ರಿಯೆಯು ಬುಧವಾರ ಸಂಜೆ 4 ಗಂಟೆಗೆ ಹೊಸೂರು ರಸ್ತೆಯಲ್ಲಿರುವ ಸಿಮೆಟ್ರಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)