ಸುಲಿಗೆಗೆ ಸಂಚು ನಡೆಸಿದ ನಾಲ್ವರ ಬಂಧನ

2

ಸುಲಿಗೆಗೆ ಸಂಚು ನಡೆಸಿದ ನಾಲ್ವರ ಬಂಧನ

Published:
Updated:

ಹೊಸಕೋಟೆ: ಹೆದ್ದಾರಿಯಲ್ಲಿ ಒಂಟಿಯಾಗಿ ಹೋಗುವ ವಾಹನ ಮತ್ತು ಪಾದಚಾರಿಗಳನ್ನು ಬೆದರಿಸಿ ಸುಲಿಗೆ ಮಾಡಲು ಸಂಚು ನಡೆಸುತ್ತಿದ್ದ ಆರೋಪದಡಿ ನಾಲ್ವರು ಯುವಕರನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಬೆಂಗಳೂರು ದೇವರಜೀವನಹಳ್ಳಿ ನಿವಾಸಿಗಳಾದ ಮಹಮದ್ ಐಸಾನ್ (20), ರಫೀಕ್ (21), ವಾಸಿಂಪಾಷಾ (19) ಮತ್ತು ಮಹಮದ್ ಜಾವೀದ್ (20) ಬಂಧಿತರು. ಆರೋಪಿಗಳಿಂದ ಚಾಕು, ಲಾಂಗು, ಮೆಣಸಿನ ಪುಡಿ, ದೊಣ್ಣೆ ಮತ್ತು ಆಟೊರಿಕ್ಷಾ ವಶಪಡಿಸಿಕೊಂಡಿದ್ದಾರೆ. ಕೋಲಾರ ಹೆದ್ದಾರಿಯ ಅಲಸಳ್ಳಿ ಗೇಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಆರೋಪಿಗಳು ಸುಲಿಗೆ ಮಾಡಲು ನಿಂತಿದ್ದಾಗ ಪೊಲೀಸರ ಬಲೆಗೆ ಬಿದ್ದರು.

ಆರೋಪಿಗಳು ಸೋಮವಾರ ಬೆಳಗಿನ ಜಾವ ಕೊಳತೂರು ಗ್ರಾಮದ ಬಳಿ ನರಸಾಪುರದಲ್ಲಿನ ಕಂಪನಿ ಒಂದಕ್ಕೆ ಕೆಲಸಕ್ಕೆ ಹೋಗಲು ನಿಂತಿದ್ದ ಎಸ್.ಮನೋಜ್ ಕುಮಾರ್ ಅವರನ್ನು ಬೆದರಿಸಿ, ಹಲ್ಲೆ ಮಾಡಿದ್ದರು. ಅವರ ಬಳಿ ಇದ್ದ ಮೊಬೈಲ್, ₹500  ದೋಚಿ ಪರಾರಿಯಾಗಿದ್ದರು. ತಲೆ ತಪ್ಪಿಸಿಕೊಂಡಿರುವ ಸಲ್ಮಾನ್ ಮತ್ತು ವಿನೋದ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳು ಕೂಲಿ ಕಾರ್ಮಿಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry