ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರ: 85,000 ಶಾಖೆಗಳ ಕಾರ್ಯ ಸ್ಥಗಿತ

7

ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರ: 85,000 ಶಾಖೆಗಳ ಕಾರ್ಯ ಸ್ಥಗಿತ

Published:
Updated:
ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರ: 85,000 ಶಾಖೆಗಳ ಕಾರ್ಯ ಸ್ಥಗಿತ

ನವದೆಹಲಿ: ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಎರಡು ದಿನಗಳ ಮುಷ್ಕರಕ್ಕೆ ಕರೆ ಕೊಟ್ಟಿರುವುದರಿಂದ ದೇಶದಾದ್ಯಂತ ಬುಧವಾರ ಮತ್ತು ಗುರುವಾರ ಬ್ಯಾಂಕಿಂಗ್‌ ಸೇವೆ ಸ್ಥಗಿತಗೊಳ್ಳಲಿದೆ.

‘ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಭಾರತೀಯ ಬ್ಯಾಂಕ್‌ಗಳ ಸಂಘದ (ಐಬಿಎ) ಜತೆ ನಡೆಸಿರುವ ಮಾತುಕತೆ ಫಲಪ್ರದವಾಗದ ಕಾರಣಕ್ಕೆ ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ’ ಎಂದು ಬ್ಯಾಂಕ್‌ ನೌಕರರ ಮುಖಂಡರು ತಿಳಿಸಿದ್ದಾರೆ.

ಭಾರತೀಯ ಬ್ಯಾಂಕ್‌ಗಳ ಸಂಘವು (ಐಬಿಎ) ಮುಂದಿಟ್ಟಿರುವ ಶೇ.2 ರಷ್ಚು ವೇತನ ಪರಿಷ್ಕರಣೆ ಪ್ರಸ್ತಾವ ವಿರೋಧಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ.

( ವೇತನ ಪರಿಷ್ಕರಣೆಗೆ ಒತ್ತಾಯಿಸಿ ರಾಯಚೂರಿನಲ್ಲಿ ಬ್ಯಾಂಕ್ ನೌಕರರು ಮುಷ್ಕರ )

ಆದಾಗ್ಯೂ, ಖಾಸಗಿ ಬ್ಯಾಂಕ್‍ಗಳಾದ ಐಸಿಐಸಿಐ, ಎಚ್‍ಡಿಎಫ್‍ಸಿ ಬ್ಯಾಂಕ್, ಏಕ್ಸಿಸ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯವೆಸಗುತ್ತಿವೆ. ತಿಂಗಳ ಕೊನೆಯಲ್ಲಿ ಮುಷ್ಕರ ಬಂದಿರುವುದರಿಂದ ಬ್ಯಾಂಕ್ ಶಾಖೆಗಳಿಂದ ಸಂಬಳ ವಿತ್‍ಡ್ರಾ ಮಾಡುವವರಿಗೆ ಸಮಸ್ಯೆ ಎದುರಾಗಲಿದೆ. ಅದೇ  ವೇಳೆ ಎಟಿಎಂನಲ್ಲಿಯೂ ಹಣದ ಕೊರತೆ ಕಂಡು ಬರಲಿದೆ.

ಮುಷ್ಕರದಿಂದಾಗಿ ದೇಶದಾದ್ಯಂತ 21 ಸಾರ್ವಜನಿಕ ಬ್ಯಾಂಕ್‍ಗಳ 85,000 ಖಾತೆಗಳ ವಹಿವಾಟು ಸ್ಥಗಿತಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry