ದೆಹಲಿ ಸಚಿವರ ನಿವಾಸದಲ್ಲಿ ಸಿಬಿಐ ದಾಳಿ: ಮೋದಿಯವರಿಗೆ ಏನು ಬೇಕು? ಕೇಜ್ರಿವಾಲ್ ಪ್ರಶ್ನೆ

7

ದೆಹಲಿ ಸಚಿವರ ನಿವಾಸದಲ್ಲಿ ಸಿಬಿಐ ದಾಳಿ: ಮೋದಿಯವರಿಗೆ ಏನು ಬೇಕು? ಕೇಜ್ರಿವಾಲ್ ಪ್ರಶ್ನೆ

Published:
Updated:
ದೆಹಲಿ ಸಚಿವರ ನಿವಾಸದಲ್ಲಿ ಸಿಬಿಐ ದಾಳಿ: ಮೋದಿಯವರಿಗೆ ಏನು ಬೇಕು? ಕೇಜ್ರಿವಾಲ್ ಪ್ರಶ್ನೆ

ನವದೆಹಲಿ: ಲೋಕೋಪಯೋಗಿ ಇಲಾಖೆಯಲ್ಲಿ ನಿಯಮ ಉಲ್ಲಂಘಿಸಿ ವಾಸ್ತುಶಿಲ್ಪಿಗಳನ್ನು ನೇಮಕ ಮಾಡಿದ್ದಾರೆ ಎಂದು ದೆಹಲಿಯ ಲೋಕೋಪಯೋಗಿ ಸಚಿವ ಸತ್ಯೇಂದರ್ ಜೈನ್ ವಿರುದ್ಧ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಜೈನ್ ವಿರುದ್ಧ ಕೇಸು ದಾಖಲಿಸಿರುವ ಸಿಬಿಐ ಬುಧವಾರ ಜೈನ್ ನಿವಾಸದ ಮೇಲೆ ದಾಳಿ ನಡೆಸಿದೆ.

ಪಿಡಬ್ಲ್ಯೂಡಿ ಅಧಿಕಾರಿಗಳ ನಿವಾಸ ಸೇರಿದಂತೆ ಇನ್ನು ಕೆಲವರ ಮವೆ ಮೇಲೆ ದಾಳಿ ನಡೆಯಲಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ಜೈನ್ ವಿರುದ್ಧ ಭ್ರಷ್ಟಾಚಾರ ಪ್ರಕರಣವೂ ದಾಖಲಾಗಿದ್ದು. ಅದರ ತನಿಖೆ ನಡೆದು ಬರುತ್ತಿದೆ.

ಸಿಬಿಐ ತನ್ನ ನಿವಾಸದ ಮೇಲೆ ದಾಳಿ ನಡೆಸಿರುವ ಸಂಗತಿಯನ್ನು ಪಿಡಬ್ಲ್ಯೂಡಿ ಸಚಿವರು ಟ್ವೀಟ್ ಮೂಲಕ ದೃಢೀಕರಿಸಿದ್ದಾರೆ.

ಸಿಬಿಐ ದಾಳಿ ನಡೆದ ಬಳಿಕ ಟ್ವಿಟರ್‍‍ನಲ್ಲಿ ಗುಡುಗಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೋದಿಯವರಿಗೆ ಏನು ಬೇಕಿದೆ ಎಂದು ಪ್ರಶ್ನಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಲ್ಲಿ ಅನುಭವವಿಲ್ಲದ 24 ವಾಸ್ತುಶಿಲ್ಪಿಗಳನ್ನು ನೇಮಕ ಮಾಡಿರುವುದರ ಬಗ್ಗೆ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry