ಎರ್ಮೈ ಫಾಲ್ಸ್‌ನಲ್ಲಿ ಬಿದ್ದು ಚಿತ್ರ ನಿರ್ದೇಶಕ ಸಂತೋಷ್‌ ಶೆಟ್ಟಿ ಸಾವು

7

ಎರ್ಮೈ ಫಾಲ್ಸ್‌ನಲ್ಲಿ ಬಿದ್ದು ಚಿತ್ರ ನಿರ್ದೇಶಕ ಸಂತೋಷ್‌ ಶೆಟ್ಟಿ ಸಾವು

Published:
Updated:
ಎರ್ಮೈ ಫಾಲ್ಸ್‌ನಲ್ಲಿ ಬಿದ್ದು ಚಿತ್ರ ನಿರ್ದೇಶಕ ಸಂತೋಷ್‌ ಶೆಟ್ಟಿ ಸಾವು

ಮಂಗಳೂರು: ಕನಸು ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಸಮೀಪದ ಎರ್ಮೈ ಫಾಲ್ಸ್‌ನಲ್ಲಿ ಕಾಲುಜಾರಿ ಬಿದ್ದು ಮೃತ ಪಟ್ಟಿದ್ದಾರೆ.

'ಕನಸು' ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಮತ್ತು ಇತರ ಮೂವರು ಬುಧವಾರ ಡ್ರೋಣ್ ಕ್ಯಾಮೆರಾದೊಂದಿಗೆ ಎರ್ಮೈ ಫಾಲ್ಸ್‌ಗೆ ಬಂದಿದ್ದರು. ಈ ವೇಳೆ ಸಂತೋಷ್ ಕಾಲು ಜಾರಿ ನೀರಿಗೆ ಬಿದ್ದರು. ಜತೆಯಲ್ಲಿದ್ದ ಪ್ರೀತಂ ಅವರು ತಕ್ಷಣ ಅಗ್ಗಿಶಾಮಕ ಸಿಬ್ಬಂದಿಗೆ ಕರೆ ಮಾಡಿದರು. ಅಗ್ನಿಶಾಮಕ ಸಿಬ್ಬಂದಿ  ಸಂತೋಷ್ ಅವರ ಮೃತದೇಹವನ್ನು ಮೇಲೆತ್ತಿದ್ದಾರೆ.

ಮೃತದೇಹವನ್ನು ಬೆಳ್ತಂಗಡಿಗೆ ತರುವ ಕಾರ್ಯ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry