ಕಾನೂನು ಹೋರಾಟ ಮುಂದುವರಿಕೆ: ಬಸವರಾಜ ಹೊರಟ್ಟಿ

7
ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ

ಕಾನೂನು ಹೋರಾಟ ಮುಂದುವರಿಕೆ: ಬಸವರಾಜ ಹೊರಟ್ಟಿ

Published:
Updated:
ಕಾನೂನು ಹೋರಾಟ ಮುಂದುವರಿಕೆ: ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.

‘ಹೋರಾಟ ಯಾವತ್ತೂ ನಿಲ್ಲುವುದಿಲ್ಲ. ಕೇಂದ್ರ ಸರ್ಕಾರ ಮರು ಶಿಫಾರಸು ಮಾಡುವಂತೆ ಹೇಳಿರುವ ಹಿಂದೆ ಷಡ್ಯಂತ್ರ ಅಡಗಿದೆ. ವೀರಶೈವರು–ಲಿಂಗಾಯತರ ನಡುವೆ ಜಗಳ ತಂದಿಡಲು ಕೇಂದ್ರ ಈ ರೀತಿ ಮಾಡಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.

‘ಇನ್ನು ಮುಂದೆ ಯಾವುದೇ ರ್‍ಯಾಲಿ ನಡೆಸುವುದಿಲ್ಲ. ಇನ್ನೇನಿದ್ದರೂ ಕಾನೂನು ಹೋರಾಟ’ ಎಂದರು.

‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕರೆದಿದ್ದ ಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಭಾಗವಹಿಸಿ ಸಲಹೆ ನೀಡಬೇಕಾಗಿತ್ತು. ನೆಪ ಹೇಳಿ ಸಭೆಗೆ ಗೈರು ಆಗಿದ್ದಾರೆ, ರೈತರ ಬಗ್ಗೆ ಕಾಳಜಿ ಇದ್ದವರು ಸಭೆಗೆ ಏಕೆ ಹೋಗಲಿಲ್ಲ’ ಎಂದು ಅವರು ಪ್ರಶ್ನಿಸಿದರು.

‘ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಹೊಸಬರಿಗೆ ಅವಕಾಶ ನೀಡುವಂತೆ ವರಿಷ್ಠರಿಗೆ ಒತ್ತಾಯಿಸಿದ್ದೇನೆ. ಸಮ್ಮಿಶ್ರ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಬರಬೇಕಿದೆ. ಬಿಜೆಪಿ ನಾಯಕರು ಪ್ರತಿ ಹೆಜ್ಜೆ ಹೆಜ್ಜೆಗೂ ಸರ್ಕಾರ ಉರುಳಿಸಲು ಕಾಯುತಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry