ಬಣ್ಣದ ಬದುಕಿನ ಕತ್ತಲು–ಬೆಳಕು: ಸಂಜಯ್‌ ದತ್‌ ಬದುಕಿನ ಸಿನಿಮಾ ‘ಸಂಜು’

7

ಬಣ್ಣದ ಬದುಕಿನ ಕತ್ತಲು–ಬೆಳಕು: ಸಂಜಯ್‌ ದತ್‌ ಬದುಕಿನ ಸಿನಿಮಾ ‘ಸಂಜು’

Published:
Updated:
ಬಣ್ಣದ ಬದುಕಿನ ಕತ್ತಲು–ಬೆಳಕು: ಸಂಜಯ್‌ ದತ್‌ ಬದುಕಿನ ಸಿನಿಮಾ ‘ಸಂಜು’

ಬೆಂಗಳೂರು: ಸಂಜಯ್‌ ದತ್‌ ಜೀವನವನ್ನಾಧರಿಸಿದ ಸಂಜು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ 6.15 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

‘ಖುಷಿಯಾಗಿದ್ದ ಮುದ್ದು ಹುಡುಗ ಡ್ರಗ್ಸ್‌ ಬಲೆಯಲ್ಲಿ ಸಿಲುಕುವುದು, ಅಲ್ಲಿಂದ ಭೂಗತ ಜಗತ್ತಿನ ನಂಟು, ಭಯೋತ್ಪಾದಕನ ಹಣೆಪಟ್ಟಿ, ಮದುವೆ, ಸಂಸಾರದಲ್ಲಿ ಒಡಕು, ತಂದೆ–ತಾಯಿ ಪ್ರೀತಿ, ಸೆರೆವಾಸ, ಸಿನಿಮಾ, ಬದಲಾದ ಪಾತ್ರ–ವೇಷ,...’ ನಿಜಕ್ಕೂ ಹೀಗಿತ್ತಾ ಸಂಜಯ್‌ ದತ್‌ ಬದುಕು? ಟ್ರೇಲರ್‌ನ ಪ್ರತಿ ದೃಶ್ಯವೂ ವಾಸ್ತವ ಮತ್ತು ಚಿತ್ರ ಜಗತ್ತಿನ ನಡುವಿನ ತಾಕಲಾಟವನ್ನು ತೋರುವಂತಿದೆ.

ಒನ್‌ ಮ್ಯಾನ್‌...ಮೆನಿ ಲೈವ್ಸ್‌ ಅಡಿ ಬರಹ ಹೊಂದಿರುವ ಸಂಜು ಸಿನಿಮಾದಲ್ಲಿ ರಣಬೀರ್‌ ಕಪೂರ್‌, ಸಂಜಯ ದತ್‌ ತದ್ರೂಪಿಯಂತೆ ಕಾಣುತ್ತಾರೆ. ಬದುಕಿನ ವಿವಿಧ ಮಜಲುಗಳಲ್ಲಿ ಸಂಜರ್‌ ದತ್‌ ಅವತಾರಗಳನ್ನು ಇಲ್ಲಿ ಕಾಣಬಹುದು.

ರಣಬೀರ್‌ ಸಂಜಯ್‌ ದತ್‌ ಪಾತ್ರದಲ್ಲಿ ಹಾಗೂ ಸಂಜಯ್‌ ದತ್‌ ಅವರ ಪತ್ನಿ ಮಾನ್ಯತಾ ದತ್‌ ಪಾತ್ರದಲ್ಲಿ ದಿಯಾ ಮಿರ್ಜಾ ಕಾಣಿಸಿಕೊಂಡಿದ್ದಾರೆ. ರಾಜ್‌ಕುಮಾರ್‌ ಹಿರಾನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸಿನಿಮಾದೊಂದಿಗೆ ಹಗರಣ, ನೋವು, ಜೈಲು, ಟೀಕೆ,...ಹೀಗೆ ಸಂಜತ್‌ ದತ್‌ ಅವರ ಕಾಣದ ಮುಖಗಳು ಇಲ್ಲಿ ತೆರೆದುಕೊಳ್ಳುತ್ತವೆ.

ಅನುಷ್ಕಾ ಶರ್ಮಾ, ಸೋನಮ್‌ ಕಪೂರ್‌, ಪರೇಶ್‌ ರಾವಲ್‌, ಬೊಮನ್‌ ಇರಾನಿ, ಮನಿಷಾ ಕೊಯಿರಾಲಾ ಸೇರಿ ಹಲವು ಪ್ರಮುಖ ಕಲಾವಿದರ ಅಭಿನಯವಿದೆ. ಜೂನ್‌ 29ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry