ಫುಟ್‌ಪಾತ್ ಅತಿಕ್ರಮಣ; ಕ್ರಮಕ್ಕೆ ಆಗ್ರಹ

7
ಅರಸೀಕೆರೆ: ನಗರಸಭೆ ನಿರ್ಲಕ್ಷ್ಯಕ್ಕೆ ಖಂಡನೆ

ಫುಟ್‌ಪಾತ್ ಅತಿಕ್ರಮಣ; ಕ್ರಮಕ್ಕೆ ಆಗ್ರಹ

Published:
Updated:
ಫುಟ್‌ಪಾತ್ ಅತಿಕ್ರಮಣ; ಕ್ರಮಕ್ಕೆ ಆಗ್ರಹ

ಅರಸೀಕೆರೆ: ನಗರದ ಟಿ.ಎಚ್‌. ರಸ್ತೆಯ ಎರಡು ಬದಿ ಪಾದಚಾರಿ ಮಾರ್ಗಗಳನ್ನು ವ್ಯಾಪಾರಿಗಳು ಅನಧಿಕೃತ ವಾಗಿ ಅತಿಕ್ರಮಿಸಿ ಕೊಂಡಿದ್ದು, ಅಧಿಕಾರಿಗಳು ಗಮನಹರಿಸಿ ಕ್ರಮವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಲ್ಲದೆ, ಅಲ್ಲಲ್ಲಿ ಫುಟ್‌ಪಾತ್‌ಗಳ ಸ್ಲ್ಯಾಬ್‌ಗಳು ಹಾಳಾಗಿವೆ.ನಗರಸಭೆಯ ಅಧಿಕಾರಿಗಳು ಈ ಕುರಿತು ಗಮನಹರಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಕ್ರಮವಹಿಸಬೇಕು ಎಂದು ಕೋರಿದ್ದಾರೆ

2004ರಲ್ಲಿ ಈ ಹೆದ್ದಾರಿಯನ್ನು ನಗರ ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲಾಯಿತು. ಆಗ ರಸ್ತೆ ಜೊತೆಗೆ ಪಾದಚಾರಿ ಮಾರ್ಗ ಅಭಿವೃದ್ಧಿಗೆ ಅಗತ್ಯ ಒತ್ತು ನೀಡಲಿಲ್ಲ.

ಪಾದಚಾರಿಗಳು ರಸ್ತೆಯಲ್ಲಿಯೇ ನಡೆದಾಡುವ ಅನಿವಾರ್ಯವಿದೆ. ಈ ಕುರಿತು ಜನಪ್ರತಿನಿಧಿಗಳು ಅಥವಾ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿಲ್ಲ ಎಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ರಸ್ತೆಯ ಎರಡೂ ಬದಿ ಬೈಕ್‌ಗಳೂ ಸೇರಿ ಖಾಸಗಿ ವಾಹನಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಲಾಗುತ್ತದೆ.ಇದು, ಸಂಚಾರ ದಟ್ಟಣೆಗೆ ಕಾರಣವಾಗಿದೆ. ಇನ್ನೊಂದೆಡೆ ವ್ಯಾಪಾರಿಗಳು ಪಾದಚಾರಿ ಮಾರ್ಗ ಅತಿಕ್ರಿಮಿಸಿದ್ದು, ಸಮಸ್ಯೆಯನ್ನು ಹೆಚ್ಚಿಸಿದೆ.

ಕೆಲವೆಡೆ ಚರಂಡಿಯ ಮೇಲೆ ಹಾಕಿರುವ ಸ್ಲ್ಯಾಬ್‌ಗಳು ಹಾಳಾ ಗಿದ್ದು, ಸಾರ್ವಜನಿಕರು ಬಿದ್ದು ಗಾಯ ಗೊಂಡಿರುವ ನಿದರ್ಶನಗಳು ಇವೆ.

ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡುವುದು ಸೇರಿ ನಗರಸಭೆ ಆಡಳಿತ, ಆಗತ್ಯ ಕ್ರಮಕೈಗೊಳ್ಳವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

**

ಪಾದಚಾರಿಗಳ ರಸ್ತೆಯನ್ನು ವ್ಯಾಪಾರಿಗಳು ಅತಿಕ್ರಮಿಸಿಕೊಂಡಿರುವುದನ್ನು ತೆರವುಗೊಳಿಸಲು, ಸ್ಲ್ಯಾಬ್‌ಗಳನ್ನು ಸರಿಪಡಿಸಲು ನಗರಸಭೆಯು ಶೀಘ್ರ ಕ್ರಮವಹಿಸಲಿದೆ

– ಎಂ.ಸಮೀವುಲ್ಲಾ, ಅಧ್ಯಕ್ಷ, ನಗರಸಭೆ 

**

‘ಟಿ.ಎಚ್‌. ರಸ್ತೆಯ ಎರಡು ಬದಿಯಲ್ಲಿ ಪಾದಚಾರಿಗಳಿಗೆ ಓಡಾಡಲು ವ್ಯವಸ್ಥೆ ಇಲ್ಲ. ಹೆದ್ದಾರಿಯಲ್ಲಿಯೇ ಓಡಾಡಬೇಕಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಲಿ

ಮಂಜುನಾಥ, ಸ್ಥಳೀಯ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry