ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಲ್ಲಿ ಹರಿದ ಲಾವಾರಸ

Last Updated 30 ಮೇ 2018, 19:30 IST
ಅಕ್ಷರ ಗಾತ್ರ

ಹೊನಲುಲು, ಅಮೆರಿಕ: ಹವಾಯಿ ದ್ವೀಪದ ಕಿಲೂಯೆ ಜ್ವಾಲಾಮುಖಿಯಿಂದ ಹೊರಬರುತ್ತಿರುವ ಲಾವಾರಸವು ’ಹೆದ್ದಾರಿ 132’ರ ಮೇಲೆ ಹರಿದಿದೆ. ಇದು ಕರಾವಳಿ ನಗರ ಕಪೊಹೊ, ವಾಣಿಜ್ಯ ಕೇಂದ್ರ ಪಹಾವೊ ಮತ್ತು ಲೇಲಾನಿ ಎಸ್ಟೇಟ್‌ಗಳನ್ನು ಸಂಪರ್ಕಿಸುತ್ತದೆ.

ತಿಂಗಳ ಹಿಂದೆ ಸ್ಫೋಟಗೊಂಡಿದ್ದ ಜ್ವಾಲಾಮುಖಿಯು ಇಲ್ಲಿನ ವಿದ್ಯುತ್ ಘಟಕವನ್ನು ಮಂಗಳವಾರ ನಾಶಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಪರಿಣಾಮ ವೆಕೇಶನ್‌ಲ್ಯಾಂಡ್ ಮತ್ತು ಕಪೊಹೊ ಸಮುದ್ರತೀರ ಸೇರಿದಂತೆ ಈ ಭಾಗದ ಕರಾವಳಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. 400ಕ್ಕೂ ಅಧಿಕ ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಲಾವಾರಸ ಹರಿಯುವಿಕೆ ನಿಂತ ಮೇಲೆ ವಿದ್ಯುತ್ ಪೂರೈಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಲಾವಾರಸ ಹರಿಯುತ್ತಿರುವ ದಿಕ್ಕಿನ ಪ್ರದೇಶಗಳಾದ ಲೇಲಾನಿ ಎಸ್ಟೇಟ್‌, ಲಾನಿಪುನ ಗಾರ್ಡನ್‌ನ ಜನರು ಸ್ಥಳ ತೊರೆಯುವಂತೆ ಸೂಚಿಸಲಾಗಿದೆ. ಕಿಲೂಯೆ ಸುತ್ತಮುತ್ತ ಪ್ರದೇಶದಲ್ಲಿ ಜ್ವಾಲಾಮುಖಿ ಹೊರಸೂಸುವ ಅನಿಲಗಳು, ದೂಳಿನ ಪ್ರಮಾಣದಿಂದಾಗಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.

ದೈಹಿಕವಾಗಿ ತೊಂದರೆ ಉಂಟುಮಾಡುವ ಸಾಧ್ಯತೆಯಿರುವುದರಿಂದ ಅನಿಲ, ದೂಳಿನಿಂದ ಸಾಧ್ಯವಾದಷ್ಟು ದೂರವಿರುವಂತೆ ಜನರಿಗೆ ಸೂಚನೆ ನೀಡಲಾಗಿದೆ. ಜ್ವಾಲಾಮುಖಿಯಲ್ಲಿ ಮತ್ತೊಂದು ಬಿರುಕು ಕಾಣಿಸಿಕೊಂಡಿದ್ದು, ಒಟ್ಟು 24 ರಂಧ್ರಗಳಿಂದ ಲಾವಾ, ದೂಳು ಹಾಗೂ ಬೂದಿ ಹೊರಚಿಮ್ಮುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT