ವರ್ಣಚಿತ್ರ ಇರುವ 600 ಬಂಡೆಗಲ್ಲು ಪತ್ತೆ

7

ವರ್ಣಚಿತ್ರ ಇರುವ 600 ಬಂಡೆಗಲ್ಲು ಪತ್ತೆ

Published:
Updated:

ಬೀಜಿಂಗ್‌: ಚಿತ್ರಕಲಾಕೃತಿ ಇರುವ ಅಂದಾಜು 600ಕ್ಕೂ ಅಧಿಕ ಬಂಡೆಗಲ್ಲುಗಳು ವಾಯವ್ಯ ಚೀನಾದ ಕ್ವಿಂಘೈ ಪ್ರಾಂತದಲ್ಲಿ ಪತ್ತೆಯಾಗಿವೆ. ಇವುಗಳು 2,000 ವರ್ಷಗಳಷ್ಟು ಹಳೆಯದಾದ ಕಲಾಕೃತಿಗಳು ಎಂದು ತಜ್ಞರು ಅಂದಾಜಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

‘ಪ್ರಾಣಿಗಳು, ಮನುಷ್ಯನ ಚಿತ್ರಗಳು, ಪರಿಸರ ಮತ್ತು ನಕ್ಷತ್ರಪುಂಜ ಇರುವ ಚಿತ್ರಗಳನ್ನು ಮೇ 5ರಂದು ಪತ್ತೆ ಹಚ್ಚಿದ್ದ ಗ್ರಾಮಸ್ಥರು, ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ.

‘ಟಿಬೆಟ್‌ನ ಸ್ವಾಯತ್ತ ಸರ್ಕಾರ ಸಹ ಈ ವರ್ಣಚಿತ್ರಗಳು ಪತ್ತೆಯಾಗಿರುವುದನ್ನು ದೃಢಪಡಿಸಿದೆ’ ಎಂದು ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry