ದೋಷ ಯಾರಿಗೆ?

7

ದೋಷ ಯಾರಿಗೆ?

Published:
Updated:

‘ಅವರಪ್ಪನಾಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ’ ಎಂದು ಪದೇ ಪದೇ ಹೇಳಿದ್ದ ಸಿದ್ದರಾಮಯ್ಯನವರು ಸ್ವತಃ ಪೌರೋಹಿತ್ಯ ವಹಿಸಿ ಅವರಪ್ಪನೊಂದಿಗೆ ಮಾತನಾಡಿ ಗದ್ದುಗೆಯನ್ನು ಸಿದ್ಧಪಡಿಸಿದರು. ಅವರ ಮಾತಿನ ವರಸೆಗೆ ಮರುಳಾಗುವ ಅದೆಷ್ಟೋ ಅಭಿಮಾನಿಗಳು, ಹಿತೈಷಿಗಳು, ಮತದಾರರು, ಪ್ರಜೆಗಳು ಇದ್ದಾರೆ. ಮಾತಾಡಿದ ದೋಷ ಮಾತಾಡಿದವರನ್ನೇ ಸುತ್ತುತ್ತದೆ. ಹಿರಿಯರು, ಪದವಿ ಏರಿದವರು ಹೇಳಿಕೆಗಳನ್ನು ಕೊಡುವಾಗ ತುಂಬಾ ಎಚ್ಚರದಿಂದ ಇರಬೇಕು. ವಿವೇಚನೆ ಬಳಸಿ ಮಾತನಾಡಬೇಕು. ‌

ಅದಿಲ್ಲವಾದರೆ ಅವರ ಹೇಳಿಕೆಗಳು ಹಾಸ್ಯಾಸ್ಪದವಾಗಿಬಿಡುತ್ತವೆ. ಮಾತು ತೂಕವನ್ನು ತೂಗಬೇಕು. ನಾಯಕರನ್ನು ಪ್ರೀತಿಸುವ, ಗೌರವಿಸುವ ಮನಸ್ಸುಗಳಿವೆ. ಮೈಕ್ ಕೈಗೆತ್ತಿಕೊಳ್ಳುವಾಗ ಅದು ನೆನಪಿಗೆ ಬರಬೇಕು. ವೃಥಾ ಮಾತನಾಡಿ ‘ಮಾತು ಮುತ್ತು’ ಎನ್ನುವ ಗಾದೆ ಸುಳ್ಳಾಗಿಸಬಾರದು.

-ಪ್ರತಿಭಾ ನ. ಹೆಗಡೆ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry