ಮಂಗಳೂರಿನಲ್ಲಿ 283.3 ಮಿ.ಮೀ ಮಳೆ

7

ಮಂಗಳೂರಿನಲ್ಲಿ 283.3 ಮಿ.ಮೀ ಮಳೆ

Published:
Updated:
ಮಂಗಳೂರಿನಲ್ಲಿ 283.3 ಮಿ.ಮೀ ಮಳೆ

ಬೆಂಗಳೂರು: ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗಿದೆ.

ಮಂಗಳೂರಿನಲ್ಲಿ (283.3ಮಿ.ಮೀ) ಮೇ ತಿಂಗಳಿನಲ್ಲಿ ಬಿದ್ದ ದಾಖಲೆ ಮಳೆ ಇದಾಗಿದೆ. ಪಣಂಬೂರಿನಲ್ಲಿ 333.8 ಮಿ.ಮೀ ಮಳೆಯಾಗಿದ್ದು, ಇದು ಕೂಡ ಮೇ ತಿಂಗಳಿನ ದಾಖಲೆಯಾಗಿದೆ. ಕರಾವಳಿ ಭಾಗಗಳಲ್ಲಿ ಭಾರಿ ಮಳೆಯಾಗಿದ್ದರೆ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಅಲ್ಲಲ್ಲಿ ಮಳೆ ಕಂಡುಬಂದಿದೆ.

ಮೂಡಬಿದಿರೆ, ಪುತ್ತೂರಿನಲ್ಲಿ 21ಸೆಂ.ಮೀ, ಉಡುಪಿಯಲ್ಲಿ 16, ಕಾರ್ಕಳದಲ್ಲಿ 13, ಸುಳ್ಯದಲ್ಲಿ 12 ಸೆಂ.ಮೀ ಮಳೆಯಾಗಿದೆ. ಕೊಡಗು ಜಿಲ್ಲೆಯ ಕೆಲವೆಡೆ 11 ಸೆಂ.ಮೀ ಮಳೆಯಾಗಿದೆ.

ಕೋಟ, ಶೃಂಗೇರಿ, ಜಯಪುರ, ಕೊಪ್ಪದಲ್ಲಿ 9, ಸುಬ್ರಹ್ಮಣ್ಯ, ನರಗುಂದದಲ್ಲಿ 8, ಭಾಗಮಂಡಲದಲ್ಲಿ 7, ಕಮ್ಮರಡಿಯಲ್ಲಿ 6, ಭದ್ರಾವತಿ, ತಾಳಿಕೋಟೆಯಲ್ಲಿ 5, ಧರ್ಮಸ್ಥಳ, ಸಿದ್ದಾಪುರ, ಹಾವೇರಿಯಲ್ಲಿ 4, ಕೊಲ್ಲೂರು, ಕುಂದಾಪುರ, ಕುಶಾಲನಗರ, ಆಗುಂಬೆಯಲ್ಲಿ 3, ಹೊನ್ನಾವರ, ಹುಬ್ಬಳ್ಳಿಯಲ್ಲಿ 2, ಅಂಕೋಲ, ಬೀದರ್‌ನಲ್ಲಿ ತಲಾ 1 ಸೆಂ.ಮೀ ಮಳೆ ದಾಖಲಾಗಿದೆ.

ಕಲಬುರ್ಗಿಯಲ್ಲಿ 42.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ರಾಜ್ಯದ ಕೆಲವು ಪ್ರದೇಶಗಳಲ್ಲಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry